ಬೆಳಗಾವಿ ಜಿಲ್ಲಾ ಪಂಚಾಯತ ಅದ್ಯಕ್ಷರಿಂದ ಕರೋನಾ ತಡೆಯಲು ಪ್ರತಿದಿನ ಪೂಜೆ
ಪ್ರಸ್ತುತ ಭಾರತದಲ್ಲಿ ಎಲ್ಲಿನೋಡಿದಲ್ಲಿ ಕರೊನಾ ಕರೊನಾದೆ ಚರ್ಚೆ ನಡೆಯುತ್ತಲಿದೆ, ಅದನ್ನು ತಡೆಗಟ್ಟುವುದು ಹೇಗೆ ಅದಕ್ಕೆ ಔಷದಿ ಇಲ್ವಾ ಇನ್ನು ಯಾವಾಗ ಖಂಡು ಹಿಡಿತಾರೆ, ಇನ್ನೂ ಎಲ್ಲಿಯ ತನಕ ನಾವು ಮನೆಯಲ್ಲಿಯೆ ಇರೋದು ಎಂಬ ನೂರಾರು ಪ್ರಶ್ನೆಗಳು ಉದ್ಭವಿಸುತ್ತಲಿವೆ,
ವಿಶ್ವದಲ್ಲಿಯೆ ವೈದ್ಯಕೀಯದಲ್ಲಿ ಎರಡನೆಯ ಸ್ಥಾನ ಪಡೆದಂತಹ ಇಟಲಿ ದೇಶದ ಪ್ರದಾನ ಮಂತ್ರಿ ಕರೋನಾಗೆ ಔಷದ ಸಿಗದೆ ಸಾವಿರಾರು ಶವಗಳನ್ನು ನೋಡಿ ಕೊನೆಗೆ ಕಣ್ಣಿರಿಟ್ಡು ದೇವರ ಮೋರೆ ಹೋಗಿದ್ದು ತಮಗೆಲ್ಲಾ ಗೊತ್ತಿದೆ,
ಹೀಗಿರುವಾಗ ಕೊನೆಯಲ್ಲಿ ದೇವರಾದರೂ ಈ ಕರೋನಾ ವೈರಸನ್ನು ಭಾರತ ದೇಶದಿಂದ ಅಷ್ಟೆ ಅಲ್ಲಾ ಇಡಿ ವೀಶ್ವದಲ್ಲಿ ಎಲ್ಲೆಲ್ಲಿ ಹರಡಿದಿಯೋ ಅಲ್ಲಿಯೂ ಕೂಡ ಆ ದೇವರು ಅದನ್ನು ಹರಡದಂತೆ ತಡೆಯಲು
ಬೆಳಗಾವಿ ಜಿಲ್ಲಾ ಪಂಚಾಯತ ಅದ್ಯಕ್ಷರಾದ ಶ್ರೀಮತಿ ಆಶಾ ಎನ್,ಪ್ರಶಾಂತರಾವ್, ಐಹೋಳೆಯವರು ಬೆಳಗಾವಿಯ ಮನೆಯಲ್ಲಿ ಲಾಕ್ ಡೌನ್ ಆದಾಗಿನಿಂದಲೂ ಕರೋನಾ ವೈರಸ ಹೊಗಲಾಡಿಸಲು ಹಾಗೂ ಎಲ್ಲೂ ಹರಡದಂತೆ ಅದರಿಂದ ಸಾವು ನೋವು ಸಂಬವಿಸದಂತೆ ದಿನಕ್ಕೆ ಎರಡು ಬಾರಿ ಶ್ರೀ ಮಹಾಲಕ್ಷ್ಮಿ ಪೂಜೆ ಮಾಡುವ ಸಂಕಲ್ಪ ಮಾಡಿಕೊಂಡು ತಮ್ಮ ಕುಟುಂಬ ಸಮೇತ ಪೂಜೆ ಮಾಡುತಿದ್ದಾರೆ,
ಎಲ್ಲರ ಮನೆಯಲ್ಲಿ ಶಾಂತತೆ, ಸ್ವಚ್ಚತೆ,ಧ್ಯಾನದ ಜೊತೆ ಮನೆಯಲ್ಲಿ ಇರುವಂತೆ ಮಾರ್ಚ 20ರಿಂದ ಮನೆಯಲ್ಲಿ ಪೂಜೆ ಮಾಡುತಿದ್ದಾರೆ ಅದಲ್ಲದೆ ಜನಸಾಮಾನ್ಯರಲ್ಲಿ ಭಾರತ ಲಾಕ್ ಡೌನ್ ಪಾಲಿಸಲು ಕರೆ ನೀಡಿ ವಿನಾಕಾರಣ ಅನಾವಶ್ಯಕವಾಗಿ ಹೊರಬರದಂತೆ ಎಲ್ಲರಿಗೂ ದೈರ್ಯದಿಂದಿರಲು ವಿನಂತಿಸಿದ್ದಾರೆ. ಇವರು ಮಾಡುತ್ತಿರುವ ಈ ಕಾರ್ಯಕ್ಕೆ ಸುತ್ತ ಮುತ್ತಲಿನ ಜನತೆ ಜಿಲ್ಲಾ ಪಂಚಯಾತ ಅವರ ಕಾರ್ಯಕ್ಕೆ ದೇವರು ಪ್ರತಿಪಲ ನೀಡಲಿ ಎಂದು ಹರಸುತಿದ್ದಾರೆ.