Breaking News
Home / Recent Posts / ವಿಶ್ವ ಹಿಂದು ಪರಿಷತ್ ಷಷ್ಠಬ್ದಿ ಕಾರ್ಯಕ್ರಮ

ವಿಶ್ವ ಹಿಂದು ಪರಿಷತ್ ಷಷ್ಠಬ್ದಿ ಕಾರ್ಯಕ್ರಮ

Spread the love

ಮೂಡಲಗಿಯಲ್ಲಿ ವಿಶ್ವ ಹಿಂದು ಪರಿಷತ್‍ನ ಷಷ್ಠಬ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 

ಮೂಡಲಗಿ: ‘ವಿಶ್ವ ಹಿಂದು ಪರಿಷತ್‍ವು ಯಾವುದೇ ಧರ್ಮ, ಸಮಾಜವನ್ನು ವಿರೋಧಿಸುವುದಿಲ್ಲ ಹಿಂದು ಧರ್ಮ ಸಂಘಟಿಸುವುದು, ಸಂರಕ್ಷಣೆ ಮಾಡುವುದು ಮುಖ್ಯ ಉದ್ಧೇಶವಾಗಿದೆ’ ಎಂದು ವಿಶ್ವ ಹಿಂದು ಪರಿಷತ್ ಬೆಳಗಾವಿ ವಿಭಾಗದ ಸಹಮಂತ್ರಿ ವಿಠಲ ಮಾಳಿ ಹೇಳಿದರು.
ಇಲ್ಲಿಯ ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್ ಮೂಡಲಗಿ ಪ್ರಖಂಡದಿಂದ ಆಯೋಜಿಸಿದ ವಿಶ್ವ ಹಿಂದು ಪರಿಷತ್‍ನ ಷಷ್ಠಬ್ಧಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪರಿಷತ್‍ವು ದೇಶದಲ್ಲಿ ಸಾಮರಸ್ಯತೆ, ಸಂಸ್ಕøತಿ, ಶಿಷ್ಟಾಚಾರ, ಪರಿಸರ ರಕ್ಷಣೆ ಹಾಗೂ ಸ್ವದೇಶಿಯತೆಯನ್ನು ಬೆಳೆಸುತ್ತಲಿದೆ ಎಂದರು.
ವಿಶ್ವ ಹಿಂದು ಪರಿಷತ್‍ನ ಪ್ರಾಂತ ಸತ್ಸಂಗ ಪ್ರಮುಖ ದೇಶಪಾಂಡೆ ಮತ್ತು ಪ್ರಾಂತ ಸತ್ಸಂಗ ಪ್ರಮುಖ ರಾರಾಯಣ ಅವರು ಮಾತನಾಡಿ ವಿಶ್ವ ಹಿಂದು ಪರಿಷತ್‍ವು 1964ರಲ್ಲಿ ಸ್ಥಾಪನೆಯಾಗಿ 60 ವಸಂತಗಳನ್ನು ಕಳೆದಿದೆ. ಹಿಂದೂಗಳು ಜಗತ್ತಿನ 40ಕ್ಕೂ ಅಧಿಕ ದೇಶಗಳಲ್ಲಿ ನೆಲೆಸಿದ್ದು, ವಿಶ್ವ ಮಟ್ಟದಲ್ಲಿ ಹಿಂದು ಸಮಾಜಕ್ಕೆ ಕಟಿಬದ್ಧರಾಗಿರಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಆರ್.ಕೆ. ಬಾಗಿ ಮಾತನಾಡಿದರು.
ನಾಗರಾಳದ ಅನಂತಾನಂದ ಶರಣರು ಮಾತನಾಡಿ ಜಗತ್ತಿಗೆ ನಾಗರೀಕತೆಯನ್ನು ಸಂಸ್ಕøತಿಯನ್ನು ಕಳಿಸಿಕೊಟ್ಟ ದೇಶ ಭಾರತವಾಗಿದ್ದು, ಜಗತ್ತಿನ ಗುರು ಸ್ಥಾನವನ್ನು ಹೊಂದಿರುವುದು. ಭಾರತದಲ್ಲಿರು ಪ್ರತಿಯೊಬ್ಬರು ಹಿಂದುತ್ತವದ ಬಗ್ಗೆ ದೇಶದ ಸಂಸ್ಕøತಿಯನ್ನು ಪ್ರೀತಿಸುವಂತಾಗಬೇಕು ಎಂದರು.
ವಿಶ್ವ ಹಿಂದು ಪರಿಷತ್ ಚಿಕ್ಕೋಡಿ ಜಿಲ್ಲಾ ಸಹ ಕಾರ್ಯದರ್ಶಿ ದಯಾನಂದ ಸವದಿ ಪ್ರಾಸ್ತಾವಿಕ ಮಾತನಾಡಿದರು.
ಅತಿಥಿಗಳಾಗಿ ಬಸವರಾಜ ಪಾಟೀಲ, ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ, ವಕೀಲ ಬಲದೇವ ಸಣ್ಣಕ್ಕಿ, ಪ್ರಕಾಶ ಮಾದರ, ಈರಪ್ಪ ಬನ್ನೂರ, ಶಿವಬಸು ಹಂದಿಗುಂದ, ರವೀಂದ್ರ ದಂತಿ, ಮಾಲತಿ ಆಶ್ರೀತ, ಮೂಡಲಗಿ ಪ್ರಖಂಡ ಅಧ್ಯಕ್ಷ ಶಿವಶಂಕರ ಖಾನಾಪುರ, ಸಿದ್ದಪ್ಪ ತಿಗಡಿ, ಶ್ರೀಧರ ಬಡಿಗೇರ, ಮಾಳಪ್ಪ ಮೆಳವಂಕಿ, ಬಸಯ್ಯ ಹಿರೇಮಠ, ದುಂಡಪ್ಪ ಹಳ್ಳೂರ ಇದ್ದರು. ಮಹಾಂತೇಶ ಕುಡಚಿ ನಿರೂಪಿಸಿದರು.

 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ