ಸೆ. 5 ರಂದು ಕೌಜಲಗಿಯ ಬಿ. ಬಿ.ಹೊಸಮನಿ ಫೌಂಡೇಶನ್‌ದಿಂದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ
ಮೂಡಲಗಿ: ಕಳೆದ ಹತ್ತು ವರ್ಷಗಳಿಂದ ಕೌಜಲಗಿಯ ಬಿ.ಬಿ.ಹೊಸಮನಿ ಫೌಂಡೇಶನ್‌ದಿಂದ ಕೊಡಮಾಡುವ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಐದು ಜನ ಶಿಕ್ಷಕರಿಗೆ ಗುರುವಾರದಂದು ಮೂಡಲಗಿ ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ ನಡೆಯು ಮೂಡಲಗಿ ತಾಲೂಕಾ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಐದು ಜನ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷ ಪರಮೇಶ್ವರ ಬಾ.ಹೊಸಮನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆದರ್ಶ ಶಿಕ್ಷಕ ಪ್ರಶಸ್ತಿಗೆ ಹಳ್ಳೂರ ಸೌ.ಸು.ಪಾಟೀಲ ಪ್ರಾಥಮಿಕ ಶಾಲೆಯ ಶಿಕ್ಷಕ ಮುತ್ತೆಪ್ಪ ಭೀಮಪ್ಪ ಹುಕ್ಕೇರಿ, ತಿಗಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಮೇಶ ಬುದ್ನಿ, ಬೆಟಗೇರಿಯ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ, ಕೌಜಲಗಿ ಹಳ್ಳೂರ ತೋಟದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾಸ ಭೀಮಪ್ಪ ಭಜಂತ್ರಿ, ಕೌಜಲಗಿ ಎನ್.ಎಸ್.ಎಫ್ ಶಾಲೆಯ ಮುಖ್ಯೋಪಾಧ್ಯಾಯ ಸಿದ್ದಪ್ಪಾ ಶಿವಪುತ್ರಪ್ಪ ಹಳ್ಳೂರ ಅವರು ಭಾಜನರಾಗಿದ್ದಾರೆ