Breaking News
Home / ತಾಲ್ಲೂಕು / ಮನೆಯ ಮುಂದೆ ಇಲ್ಲವೆ ಹಿತ್ತಲದಲ್ಲಿರುವ ಸ್ಥಳದಲ್ಲಿ ಕೈತೋಟವನ್ನು ಮಾಡಿ – ಡಾ. ರಾಮಚಂದ್ರ ನಾಯ್ಕ

ಮನೆಯ ಮುಂದೆ ಇಲ್ಲವೆ ಹಿತ್ತಲದಲ್ಲಿರುವ ಸ್ಥಳದಲ್ಲಿ ಕೈತೋಟವನ್ನು ಮಾಡಿ – ಡಾ. ರಾಮಚಂದ್ರ ನಾಯ್ಕ

Spread the love

ಮೂಡಲಗಿ ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ತಾರಸಿ ತೋಟ ಮತ್ತು ಕೈ ತೋಟಗಳ ಮಹತ್ವ ಕುರಿತು ಎರ್ಪಡಿಸಿದ್ದ ಆನ್‍ಲೈನ್ ತರಬೇತಿಯಲ್ಲಿ ಡಾ. ರಾಮಚಂದ್ರ ನಾಯ್ಕ್ ಮಾತನಾಡಿದರು

ಕೈತೋಟ ಮಾಡಿ ಆರೋಗ್ಯ ಸುಧಾರಿಸಿಕೊಳ್ಳಿರಿ

ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ‘ರೈತರ ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ತಾರಸಿ ತೋಟ ಮತ್ತು ಕೈ ತೋಟಗಳ ಮಹತ್ವ’ ಕುರಿತು ಆನ್‍ಲೈನ್ ಮೂಲಕ ತರಬೇತಿಯನ್ನು ಏರ್ಪಡಿಸಿದ್ದರು.
ಆರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಕೋಯ್ಲೋತ್ತರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಮಚಂದ್ರ ನಾಯ್ಕ ಅವರು ವಿಷಯ ಕುರಿತು ಮಾತನಾಡಿದ ಅವರು ‘ಮನೆಯ ಮುಂದೆ ಇಲ್ಲವೆ ಹಿತ್ತಲದಲ್ಲಿರುವ ಸ್ಥಳದಲ್ಲಿ ಕೈತೋಟವನ್ನು ಮಾಡಿ ಅಲ್ಲಿ ತರಕಾರಿ ಮತ್ತು ಹಣ್ಣು ಬೆಳೆಯುವ ಮೂಲಕ ಕುಟುಂಬದ ಆರೋಗ್ಯ ಸುಧಾರಿಸಿಕೊಳ್ಳಬಹುದು’ ಎಂದರು.
ಮನೆಯ ಕೈತೋಟಕ್ಕೆ ಮನೆಯ ಬಚ್ಚಲ ನೀರು, ಮನೆಯಲ್ಲಿ ಸಂಗ್ರಹವಾಗುವ ಗೊಬ್ಬರ ಬಳಸುವುದದರಿಂದ ಖರ್ಚು ಇರುವದಿಲ್ಲ. ಕುಟುಂಬದ ಸದಸ್ಯರು ಮನೆಯ ತೋಟದಲ್ಲಿ ನಿತ್ಯ ಕೆಲಸಮಾಡುವುದರಿಂದ ಚೈತನ್ಯತೆ ವೃದ್ಧಿಯಾಗುತ್ತದೆ, ಮಕ್ಕಳಿಗೆ ಪ್ರಕೃತಿಯ ಪಾಠವಾಗುತ್ತದೆ’ ಎಂದರು.
ಸೊಪ್ಪು ತರಕಾರಿಗಳೊಂದಿಗೆ ಮೂಲಂಗಿ, ಈರುಳ್ಳಿ, ಬೀಟ್‍ರೂಟ್, ಗಜ್ಜರೆ, ಹುರುಳಿ, ಹೀರೆ, ಹಾಗಲ, ಪಡವಲ, ಕುಂಬಳ, ಸೌತೆ, ಬೆಂಡೆಗಳನ್ನು ಬೆಳೆಯಬಹುದಾಗಿದೆ ಎಂದರು.
ತರಕಾರಿ ಮತ್ತು ಹಣ್ಣು ಬೆಳೆಯಬೇಕಾದರೆ ಇರಬೇಕಾದ ಮಣ್ಣಿನ ಸಿದ್ಧತೆಯ ಕುರಿತು ಡಾ. ರಾಮಚಂದ್ರ ಅವರು ತಿಳಿಸಿದರು.
ಕೃಷಿ ಅಧಿಕಾರಿ ರುಬಿನಾ ಮಸೂತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ತಟಗಾರ, ಡಾ. ದಿಲೀಪ ಇದ್ದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ