Breaking News
Home / ತಾಲ್ಲೂಕು / ಮೂಡಲಗಿ ತಾಲೂಕಿನಲ್ಲಿ ಪರೀಕ್ಷೆಗಳು ಅಚ್ಚುಕಟ್ಟಾಗಿ ಮಂಡಳಿಯ ನಿಯಮಾನುಸಾರ ಜರುಗಿವೆ

ಮೂಡಲಗಿ ತಾಲೂಕಿನಲ್ಲಿ ಪರೀಕ್ಷೆಗಳು ಅಚ್ಚುಕಟ್ಟಾಗಿ ಮಂಡಳಿಯ ನಿಯಮಾನುಸಾರ ಜರುಗಿವೆ

Spread the love

ಮೂಡಲಗಿ: ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪರೀಕ್ಷಾ ಮಂಡಳಿಯ ನಿಯಮಾನುಸಾರ ಜರುಗುತ್ತಿವೆ. ಪರೀಕ್ಷಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಪರೀಕ್ಷೆಯ ಮೂಲಕ ಉತ್ತಮ ಅಂಕಗಳನ್ನು ಪಡೆದು ಭವ್ಯ ಪ್ರಜೆಗಳಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗುವದು ಎಂದು ಚಿಕ್ಕೋಡಿ ಉಪನಿಧೇಶಕರ ಕಛೇರಿಯ ಶಿಕ್ಷಣಾಧಿಕಾರಿ ಅನಿಲಕುಮಾರ ಗಂಗಾಧರ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅವರು ಗುರುವಾರ ಜರುಗಿದ ಎಸ್.ಎಸ್.ಎಲ್.ಸಿಯ ಕನ್ನಡ ಭಾಷಾ ಪರೀಕ್ಷೆಯ ಶಿವಾಪೂರ (ಹ), ಖಾನಟ್ಟಿ, ಪಟಗುಂದಿ, ಮೂಡಲಗಿಯ ಪರೀಕ್ಷಾ ಕೇಂದ್ರಗಳಿಗೆ ಸಂದರ್ಶನ ನೀಡಿದರು. ಮೂಡಲಗಿ ತಾಲೂಕಿನಲ್ಲಿ ಪರೀಕ್ಷೆಗಳು ಅಚ್ಚುಕಟ್ಟಾಗಿ ಮಂಡಳಿಯ ನಿಯಮಾನುಸಾರ ಜರುಗಿವೆ. ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಸ್ಕ್ರಿನಿಂಗ್, ಮಾಸ್ಕ್ ಹಾಗೂ ಅಗತ್ಯ ಆರೋಗ್ಯ, ಪೊಲೀಸ್, ಸ್ಥಳೀಯ ಪಂಚಾಯತಗಳಿಂದ ಕೈಗೊಂಡ ಕ್ರಮಗಳು ಮೆಚ್ಚುವಂತಹದು. ಸಿ.ಸಿ ಕ್ಯಾಮರಾ, ಆಸನದ ವ್ಯವಸ್ಥೆಯು ಉತ್ತಮ ರೀತಿಯಾಗಿದ್ದು ಪರೀಕ್ಷಾ ಮಂಡಳಿ ನಿಯಮಾನುಸಾರ ಯಶಸ್ವಿಯಾಗಿ ಪರೀಕ್ಷೆಗಳು ನಡೆಯುವಂತೆ ಕಾಳಜಿ ಕ್ರಮವಹಿಸಿರುವದು ಪ್ರಶಂಸಾರ್ಹವಾಗಿದೆ ಎಂದು ಹೇಳಿದರು.
ಮೂಡಲಗಿ ಬಿಇಒ ಅಜಿತ ಮನ್ನಿಕೇರಿಯವರು ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಾದ ಮೆಳವಂಕಿ, ಸುಣಧೋಳಿ, ಕುಲಿಗೊಡ, ಪಟಗುಂದಿಗಳಿಗೆ ಭೇಟಿ ನೀಡಿ ಪರೀಕ್ಷಾ ಮೆಲ್ವಿಚಾರಣೆ ಮಾಡಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಡೈಟ್‍ನ ಉಪನ್ಯಾಸಕ ಸಂಜಯ ಯಾದಗೂಡೆ, ಪ್ರಭಾರ ಡಿವೈಪಿಸಿ ಸದಾಶಿವ ಹಚಡದ, ಪರೀಕ್ಷಾ ಅಧಿಕ್ಷಕರಾದ ಶ್ರೀಕಾಂತ ಗುಗ್ಗರಿ, ಕೆ.ಎಸ್ ಭಜಂತ್ರಿ, ಎ.ಆರ್ ಶೇಗುಣಸಿ, ಎಸ್.ಎಸ್.ಎಲ್.ಸಿ ಪರೀಕ್ಷಾ ನೊಡಲ್ ಸತೀಶ ಬಿ.ಎಸ್, ಇಸಿಒ ಟಿ ಕರಿಬಸವರಾಜು, ಬಿಆರ್‍ಪಿ ಗೋಪಾಲ ಪತ್ತಾರ, ಕೆ.ಎಲ್ ಮೀಶಿ ಹಾಜರಿದ್ದರು.
ವರದಿ: ಕೆ.ವಾಯ್ ಮೀಶಿ


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ