ವೇಟ್ ಲಿಪ್ಟಿಂಗ್‌ದಲ್ಲಿ ರಾಷ್ಟ ಮಟ್ಟಕ್ಕೆ ಆಯ್ಕೆ
ಮೂಡಲಗಿ: ಮೂಡಲಗಿ ಕೇಶವಕುಮಾರ ಲಕ್ಕಪ್ಪ ವ್ಯಾಪಾರಿ ರಾಜೀವ ಗಾಂಧಿ ವಿಶ್ವವಿದ್ಯಾಲಯದ ರಾಜ್ಯ ಮಟ್ಟದ 89 ಕೆಜಿ ವಿಭಾಗದ ವೇಟ್ ಲಿಪ್ಟಿಂಗ್‌ದಲ್ಲಿ ಸತತ ಎರಡನೇ ಬಾರಿ ಪ್ರಥಮ ಸ್ಥಾನದಲ್ಲಿ ಬಂಗಾರ ಪದಕ ಪಡೆದುಕೊಂಡು ರಾಷ್ಟ್ರ ಮಟ್ಟದ ವೇಟ್ ಲಿಪ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿರುವನು.
ಸದ್ಯ ಮೂಡಬಿದರಿಯ ಆಳ್ವಾ ಅಯುರ್ವೇದಿಕ ವೈದ್ಯಕೀಯ ಕಾಲೇಜುದಲ್ಲಿ ದ್ವಿತೀಯ ವರ್ಗದಲ್ಲಿ ಓದುತ್ತಿರುವ ಕೇಶವಕುಮಾರ ಮೂಡಲಗಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿರುವನು. ಜವಲಿನ್ ಥ್ರೋದಲ್ಲಿಯೂ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುವರು.