Breaking News
Home / Recent Posts / ಸಿಎಂ ಬಸವರಾಜ ಬೊಮ್ಮಾಯಿಯವರು ನೀಡಿದ ಭರವಸೆಯಂತೆ ಅ.22ರಂದು 2ಎ ಮೀಸಲಾತಿಯನ್ನು ಘೋಷಣೆ ಮಾಡದಿದ್ದರೆ ಉಪವಾಸ ಸತ್ಯಗ್ರಹ ಮಾಡಲಾಗುವುದು- ಬೆಳಗಾವಿ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ

ಸಿಎಂ ಬಸವರಾಜ ಬೊಮ್ಮಾಯಿಯವರು ನೀಡಿದ ಭರವಸೆಯಂತೆ ಅ.22ರಂದು 2ಎ ಮೀಸಲಾತಿಯನ್ನು ಘೋಷಣೆ ಮಾಡದಿದ್ದರೆ ಉಪವಾಸ ಸತ್ಯಗ್ರಹ ಮಾಡಲಾಗುವುದು- ಬೆಳಗಾವಿ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ

Spread the love

ಮೂಡಲಗಿ: 2ಎ ಮೀಸಲಾತಿಯನ್ನು ಅ.22ರ ಒಳಗಾಗಿ ಘೋಷಣೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿಯವರು ನೀಡಿದ ಭರವಸೆಯಂತೆ ಅ.22ರಂದು 2ಎ ಮೀಸಲಾತಿಯನ್ನು ಘೋಷಣೆ ಮಾಡದಿದ್ದರೆ ಅ.23ರಂದು ಶಿಗ್ಗಾವ್ ಚೆನ್ನಮ್ಮ ವೃತ್ತದಲ್ಲಿ ಉಪವಾಸ ಸತ್ಯಗ್ರಹ ಮಾಡಲಾಗುವುದೆಂದು ಪಂಚಮಸಾಲಿ ಸಂಘಟನೆಯ ಬೆಳಗಾವಿ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ ಹೇಳಿದರು.

ಶನಿವಾರದಂದು ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲಸಂಗಮ ಮಹಾಪೀಠದ ಪಂಚಮಸಾಲಿ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೇತ್ಯಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿಯ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಈಗಾಗಲೇ ಸರ್ಕಾರದ ವಿರುದ್ದ ಏನು ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಲಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಮಾಜ ಮುಖಂಡ ರವಿ ಮಹಾಲಿಂಗಪೂರ ಮಾತನಾಡಿ, ಪಂಚಮಸಾಲಿಗಳು ಸಾಕಷ್ಟು ಹೋರಾಟಿ ಮಾಡಿ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಈಗಲಾದರೂ ಸರ್ಕಾರ ಪಂಚಮಸಾಲಿಗಳಿಗೆ ತಾವು ನೀಡಿದ ಭರವಸೆಯಂತೆ 2ಎ ಮೀಸಲಾತಿಯನ್ನು ಘೋಷಣೆ ಮಾಡಬೇಕು. ಇಲ್ಲವಾದರೇ ಇಷ್ಟು ದಿನ ಪಂಚಮಸಾಲಿಗಳು ಶಾಂತ ಮೂರ್ತಿಗಳಾಗಿದರು. ಇನ್ನೂ ಮುಂದೆ ಆ ಶಾಂತ ಮೂರ್ತಿಗಳು ಉಗ್ರ ರೂಪ ತಾಳಿದರೇ ಸರ್ಕಾರ ಮಾತ್ರ ಉಳಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಂಘಟನೆಯ ತಾಲೂಕಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಕೌಜಲಗಿ, ಮುಂಖಡಾರ ಹೊಳೆಪ್ಪ ನಿಂಗನೂರ, ಚನ್ನಗೌಡ ಪಾಟೀಲ, ರವಿ ತುಕ್ಕನ್ನವರ, ಸತ್ತೇಪ್ಪ ವಾಲಿ, ಈರಣ್ಣ ಅಂಬಿ, ಬಸವರಾಜ ರಂಗಾಪೂರ, ಕಲ್ಮೇಶ ಗೋಕಾಕ, ಬಸವರಾಜ ಶೆಕ್ಕಿ, ಸುಭಾಸ ಬಾಗೋಜಿ. ಸುರೇಶ ಅಡಗಿಮನಿ, ಅಶೋಕ ಕೊಳವಿ ಇದ್ದರು.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ