Breaking News
Home / ಬೆಳಗಾವಿ / ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಬಸವ ರಂಗಮಂಟಪದಲ್ಲಿ ಜರುಗಿದ 31ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ

ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಬಸವ ರಂಗಮಂಟಪದಲ್ಲಿ ಜರುಗಿದ 31ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ

Spread the love


ಮೂಡಲಗಿ: ‘ಅಯ್ಯಪ್ಪಸ್ವಾಮಿ ಮಾಲಧಾರಿಗಳ ಕಠಿಣ ವ್ರತವು ತಪಸ್ಸು ಇದ್ದಂತೆ. ದೇವರ ಮೇಲಿರುವ ಭಕ್ತಿಯಿಂದ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ’ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಪಟ್ಟಣದ ಅಯ್ಯಪ್ಪಸ್ವಾಮಿ ಸೇವಾ (ರವಿ ನೇಸುರು ಗುರುಸ್ವಾಮಿಯ ಸನ್ನಿಧಾನದ) ಸಮಿತಿಯವರು ಬಸವ ರಂಗಮಂಟಪದಲ್ಲಿ ಏರ್ಪಡಿಸಿದ್ದ 31ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ, ಅಗ್ನಿ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ನೆರವೇರಿಸುವ ಪೂಜೆಯಲ್ಲಿ ಭಾಗವಹಿಸುವುದು ಸಹ ಪುಣ್ಯದ ಕಾರ್ಯವಾಗಿದ್ದು, ಅಂಥ ಭಾಗ್ಯವನ್ನು ನಾವೆಲ್ಲ ಪಡೆದುಕೊಂಡಿರುವ ಸಂತೃಪ್ತಿ ನಮ್ಮದಾಗಿದೆ ಎಂದರು.
ಅಯ್ಯಪ್ಪಸ್ವಾಮಿಯ ಮಾಲಾಧಾರಿಗಳು ವ್ರತವನ್ನು ಪಾಲಿಸಿ ತಮಗಷ್ಟೇ ಅಲ್ಲಇಡೀ ಸಮಾಜಕ್ಕೆ ಶಾಂತಿ, ನೆಮ್ಮದಿಯನ್ನು ತರುವ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ ಎಂದರು.
ಭಾರತಿಯ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಬಾಗಲಕೋಟದ ಲಕ್ಷ್ಮಣ ಅಬ್ಜಲಪುರ ಗುರುಸ್ವಾಮಿಗಳು ಮಾತನಾಡಿ 50 ವರ್ಷಗಳ ಪೂರ್ವದಿಂದ ಶಬರಿ ಮಲೈಗೆ ಪಾದಯಾತ್ರೆಗೆ ಹೋಗುವ ಪರಂರೆಯು ನಡೆದುಕೊಂಡು ಬಂದಿದೆ.ಅನೇಕ ಭಕ್ತರು ಅಯ್ಯಪ್ಪಸ್ವಾಮಿಯ ಕುರಿತು ಪದ್ಯ ರಚಿಸಿ ಹಾಡುವ ಮೂಲಕ ಅಯ್ಯಪ್ಪನ ಮಹಿಮೆಯು ನಾಡಿಗೆಲ್ಲ ಪಸರಿಸುವಂತೆ ಮಾಡಿದ್ದಾರೆ ಎಂದರು.
ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮಿಗಳು ಮಾತನಾಡಿ ಅಯ್ಯಪ್ಪಸ್ವಾಮಿಗೆ ಭಕ್ತಿಯಿಂದ 41 ದಿನಗಳ ವರೆಗೆ ನಿಷ್ಠೆಯಿಂದ ವ್ರತವನ್ನು ಮಾಡಿ ಶಬರಿ ಮಲೈ ಯಾತ್ರೆ ಮಾಡಿದರು ಸಹ ಬಹು ದೊಡ್ಡ ಪುಣ್ಯದ ಕಾರ್ಯವಾಗಿದೆ.
ಭಾಗೋಜಿಕೊಪ್ಪ-ಮುನ್ಯಾಳದ ಡಾ.ಶಿವಲಿಂಗ ಮುರಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು.
ಶಂಕರಯ್ಯ ಸ್ವಾಮಿಗಳು, ಬೆಳಗಾವಿ ಮಾರುತಿಗುರುಸ್ವಾಮಿ ವೇದಿಕೆಯಲ್ಲಿದ್ದರು.
ಸನ್ನಿಧಾನದ ಗುರುಸ್ವಾಮಿಗಳಾದ ರವಿ ನೇಸೂರ, ಬೈಂದೂರದ ರಾಜೀವ ಶೆಟ್ಟಿ ಪೂಜೆ ನೆರವೇರಿಸಿದರು.


ಅಯ್ಯಪ್ಪಸ್ವಾಮಿಗಳು ಅಗ್ನಿ ಹಾಯವ ವ್ರತವನ್ನು ಪೂರೈಸಿದರು.
ಗುರ್ಲಾಪುರ, ಹಳ್ಳೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳ ಗುರುಸ್ವಾಮಿಗಳು ಪೂಜೆಯಲ್ಲಿ ಭಾಗವಹಿಸಿದರು.
ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಹನಮಂತ ಗುಡ್ಲಮನಿ ಮತ್ತು ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಸನ್ನಿಧಾನದಿಂದ ಆನೆ ಅಂಬಾರಿಯಲ್ಲಿ ಅಯ್ಯಪ್ಪಸ್ವಾಮಿಯ ಮೂರ್ತಿ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಡೊಳ್ಳು ಕುಣಿತ, ಬ್ಯಾಂಡ್‍ತಂಡ, ಝಾಂಜ್ ಪಥಕ ವಾದ್ಯ, ಕರಡಿ ಮಜಲು, ಸಿದ್ದಿಸೋಗು, ಲೇಜಿಮ್, ಗೊಂಬೆಗಳ ಕುಣಿತ, ಕುದರೆ-ಒಂಟಿ ಸವಾರಿ ಹಾಗೂ ಕನ್ನಿ ಸ್ವಾಮಿಗಳ ಕುಂಭ ಮೇಳ ಇವು ಎಲ್ಲರ ಗಮನಸೆಳೆದವು.
ಶಿಕ್ಷಕರಾದ ಬಸವರಾಜ ಸಸಾಲಟ್ಟಿ, ಎನ್.ಜಿ. ಹೆಬ್ಬಾಳ ಸ್ವಾಗತಿಸಿ ನಿರೂಪಿಸಿದರು.

 


Spread the love

About inmudalgi

Check Also

ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ ಅಧ್ಯಕ್ಷರಾಗುವ ಮಾತೇ ಇಲ್ಲ – ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಬೆಳಗಾವಿ: ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್‌ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ