ಗ್ರಾಮೀಣ ಕ್ರೀಡಾ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಬೆಳೆಯಲಿ- ಜ್ಯೋತಿ ಪಾಟೀಲ
ಮೂಡಲಗಿ: ಗ್ರಾಮೀಣ ಮಟ್ಟದಲ್ಲಿ ಯುವಕ ಸಂಘಗಳು ಆಯೋಜಿಸುವ ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವುದಲ್ಲದೆ, ಗ್ರಾಮೀಣ ಜನರಿಗೆ ಉಲ್ಲಾಸದಾಯಕ ವಾತಾವರಣ ಕಲ್ಪಿಸಿಕೊಡುತ್ತವೆ ಎಂದು ಮೂಡಲಗಿ ಸಿವಿಲ್ ಹಾಗೂ ಜೆ ಎಮ್ ಎಫ್ ಸಿ ನ್ಯಾಯಾಧೀಶರಾದ ಶ್ರೀಮತಿ ಜ್ಯೋತಿ ಪಾಟೀಲ ಹೇಳಿದರು.
ಅವರು ಮೂಡಲಗಿ ನಗರದ ಶ್ರೀ ಎಲ್ ವಾಯ್ ಆಡಿಹೂಡಿ ಶಾಲಾ ಮೈದಾನದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಡಾ ಅಂಬೇಡ್ಕರ್ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಡವಳೇಶ್ವರ, ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮೂಡಲಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಯುವಕ ಸಂಘಗಳಿರುವಲ್ಲಿ ಉತ್ಸಾಹಿ ಯುವತಿ ಮಂಡಳಿ ಇದ್ದರೆ ಅಲ್ಲಿ ಸವಾರ್ಂಗೀಣ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.
ಮೂಡಲಗಿ ಕ್ಷೆತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹ ಅವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ನೆಹರು ಯುವ ಕೇಂದ್ರ ಸಂಘಟನೆಯವರು ಆಯೋಜಿಸಿರುವ ಕ್ರೀಡಾಕೂಟ ಯಶಸ್ವಿಯಾಗಿ ಸಾಗಲಿ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ಮಾತನಾಡಿ ಕ್ರೀಡಾ ಪಟುಗಳಿಗೆ ಸೋಲು ಗೆಲುವು ಒಂದು ನಾನ್ಯದ ಮುಖಗಳಿದಂತೆ ಸೋತವರು ಕುಗ್ಗದೆ ಗೆದ್ದವರು ಹಿಗ್ಗದೆ ಕ್ರೀಡಾ ಮನೋಭಾವದಿಂದ ಆಟವಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎಲ್ ವಾಯ್ ಅಡಿಹುಡಿ ವಹಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾಧಿಗಳ ಸಂಘದ ಅಧ್ಯಕ್ಷರಾದ ಆರ್ ಆರ್ ಭಾಗೋಜಿ, ಎಲ್ ಬಿ ಒಡೆಯರ, ಎಮ್ ಆರ್ ಗೋಣಿ, ಮೂಡಲಗಿ ಪಿ ಎಸ್ ಐ ರಾಜು ಪೂಜೇರಿ, ರಾಜ್ಯ ಪ್ರಶಸ್ತಿ ಪುರಸ್ಕøತರಾದ ಹಣಮಂತ ಹಾವಣ್ಣವರ, ಸುಭಾಸ ಗೊಡ್ಯಾಗೋಳ, ಯಲ್ಲಾಲಿಂಗ ವಾಳದ, ಶ್ರೀಮತಿ ಕೆ ಪಿ ಕುಡತೆ, ಪ್ರವೀಣ ಮ್ಯಾಗಾಡಿ, ಶಶಿ ಪಟಗೊಂದಿ, ದನಪಾಲ ಮ್ಯಾಗಾಡಿ ಸಚಿನ್ ಕಾಂಬಳೆ, ರವಿ ಕರಿಗಾರ, ಹಣಮಂತ ಮ್ಯಾಗಾಡಿ ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಹಾಗೂ ಕ್ರೀಡಾಪಟುಗಳು, ಮುಂತಾದವರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯಶಿಕ್ಷಕ ಶಶಿಧರ್ ಆರಾಧ್ಯ ನಿರೂಪಿಸಿದರು. ಶಿಲ್ಪಾ ಗಾಡದ ಸ್ವಾಗತಿಸಿದರು. ದುರ್ಗಪ್ಪ ಮ್ಯಾಗಾಡಿ ವಂದಿಸಿದರು.