Breaking News
Home / Recent Posts / ಮೋಹ, ಮಮಕಾರಗಳನ್ನು ಕಳೆದುಕೊಂಡ ವ್ಯಕ್ತಿ ನಿಜವಾದ ಜೀವನ ಮುಕ್ತಿ- ಫಕೀರಸಿದ್ಧರಾಮ ಮಹಾಸ್ವಾಮಿಜಿ

ಮೋಹ, ಮಮಕಾರಗಳನ್ನು ಕಳೆದುಕೊಂಡ ವ್ಯಕ್ತಿ ನಿಜವಾದ ಜೀವನ ಮುಕ್ತಿ- ಫಕೀರಸಿದ್ಧರಾಮ ಮಹಾಸ್ವಾಮಿಜಿ

Spread the love

ಬೆಟಗೇರಿ:ದೇವಿಯ ಪುರಾಣವೆಂದರೆ ದೇಹದ ಪುರಾಣವಿದ್ದಂತೆ ದೇಹದಲ್ಲಿರುವ ಅವಗುಣಗಳನ್ನು ಕಳೆದುಕೊಳ್ಳುವುದೇ ರಾಕ್ಷಸರ ಸಂವಹಾರವಿದ್ದಂತೆ, ಮೋಹ, ಮಮಕಾರಗಳನ್ನು ಕಳೆದುಕೊಂಡ ವ್ಯಕ್ತಿ ನಿಜವಾದ ಜೀವನ ಮುಕ್ತ ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಹೇಳಿದರು.


ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ನವರಾತ್ರಿಯ ಅಂಗವಾಗಿ ಅ.20ರಂದು ನಡೆದ ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ, ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಜಿಗಳ ಅನುಷ್ಠಾನ ಮಂಗಲೋತ್ಸವ ಹಾಗೂ ಫಕೀರೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.


ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡಿದ ಶ್ರೀದೇವಿಯು ಮಹಾನ್ ಶಕ್ತಿ ದೇವತೆÉಯಾಗಿದ್ದಾಳೆ. ಮಮದಾಪೂರದ ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಜಿಯವರು ನಿಜವಾಗಿಯೂ ನಿರಾಭಾರಿ ಶಿವಯೋಗಿಯಾಗಿದ್ದಾರೆ ಎಂದು ಮೌನ ಮಲ್ಲಿಕಾರ್ಜುನ ಸ್ವಾಮಿಜಿ ಜೋತೆ ಭಕ್ತರ ಭಕ್ತಿ, ಅವಿನಾಭಾವ ಸಂಬಂಧದ ಕುರಿತು ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಶ್ಲಾಘಿಸಿದರು.
ಸ್ಥಳೀಯ ಮೌನ ಮಲ್ಲಿಕಾರ್ಜುನ ಮಹಾ ಶಿವಯೋಗಿಗಳು ಶಿವಾನುಭವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯ, ಹಿಪ್ಪರಗಿ ಕುಮಾರ ಸಿದ್ಧಾರೂಢ ಶರಣರು ಸಮ್ಮುಖ ವಹಿಸಿ ಮಾತನಾಡಿದರು.
ಮಮದಾಪೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರಿಂದ ಆರತಿ, ಕುಂಭ, ಜಾನಪದ ವಿವಿಧ ಕಲಾತಂಡ ಹಾಗೂ ಸಕಲ ವಾಧ್ಯಮೇಳಗಳೊಂದಿಗೆ ಶಿರಹಟ್ಟಿ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ಅಡ್ಡಪಲ್ಲಕ್ಕಿ ಮಹೋತ್ಸವ ಸಾಯಂಕಾಲ 4 ಗಂಟೆಗೆ ಜರುಗಿದ ಬಳಿಕ ಸಂಜೆ 7 ಗಂಟೆಗೆ ಶಿವಾನುಭವ ಸಭೆ ನಡೆಯಿತು. ಜಗದಾಳದ ಉದಯ ಪತ್ತಾರ ಅವರ ತಬಲಾ ಸಾಥದೊಂದಿಗೆ ಮಮದಾಪೂರದ ಚಿದಾನಂದ ಪಟಾತ ಅವರಿಂದ ಸಂಗೀತ ಸೇವೆ, ಕುಮಾರಿ ಲಕ್ಷ್ಮೀ ಒಡೆಯರ ಹಾಗೂ ಸಂಗಡಿಗರಿಂದ ಭರತನಾಟ್ಯ ಜರುಗಿತು. ಕರಡಿಗುದ್ದಿಯ ವಿರುಪಾಕ್ಷ ರಾಚಣ್ಣವರ ಅನ್ನ ದಾಸೋಹ ಸೇವೆ ನೆರವೇರಿಸಿದರು. sಶ್ರೀಳನ್ನು, ದಾನಿಗಳನ್ನು, ಗಣ್ಯರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ-ಗುರು, ಚರಮೂರ್ತಿಗಳು, ಸಂತ-ಶರಣರು, ಆಧ್ಯಾತ್ಮ ಪ್ರವೀಣರು, ಗಣ್ಯರು ಸೇರಿದಂತೆ ಶ್ರೀದೇವಿ ಪುರಾಣ ಪ್ರವಚನ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯಲ್ಲಿ ಶ್ರೀಮಠದ ಭಕ್ತರು ಇದ್ದರು. ಶ್ರೀದೇವಿಯ ಪುರಾಣ ಪ್ರವಚನ ಆಯೋಜಕ ಸಮಿತಿ ಸಂಚಾಲಕ ಮಂಜುನಾಥ ಶರಣರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಶೈಲ ಶರಣರು ಕೊನೆಗೆ ವಂದಿಸಿದರು.


Spread the love

About inmudalgi

Check Also

ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ- ಎಸ್. ಎನ್. ಕುಂಬಾರ

Spread the loveಮೂಡಲಗಿ : ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ ಮತ್ತು ವಿದ್ಯಾರ್ಥಿಗಳು ಸೃಜನಶೀಲ ಸಂಪನ್ಮೂಲ ಕೌಶಲ್ಯಗಳನ್ನು ಹೊಂದುವದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ