*ಮೂಡಲಗಿ, ಶ್ರೀರಾಮ ನವಮಿ ಪ್ರಯುಕ್ತ ಪೂಜೆ, ಸಿಹಿ ವಿತರಣೆ*
ಮೂಡಲಗಿ: ಶ್ರೀರಾಮ ನವಮಿ ಪ್ರಯುಕ್ತ ಇಲ್ಲಿನ ಪಾಟೀಲ ತೋಟ ಗುರ್ಲಾಪೂರ ರಸ್ತೆಯಲ್ಲಿರುವ ಶ್ರೀರಾಮ ವೃತ್ತದಲ್ಲಿ ಶ್ರೀರಾಮನ ಫೋಟೋಕ್ಕೆ ಶ್ರದ್ಧೆ ಭಕ್ತಿಯಿಂದ ಪೂಜೆ ಸಲ್ಲಿಸಿ ಸಿಹಿ ವಿತರಿಸಿ ಸಂಭ್ರಮದಿಂದ ಶ್ರೀರಾಮ ನವಮಿ ಆಚರಿಸಲಾಯಿತು.ಈರಯ್ಯ ಹಿರೇಮಠ ಸ್ವಾಮಿಗಳು ಪೂಜೆ ನೆರವೇರಿಸಿದರು .
ಈ ವೇಳೆ ಮುಖಂಡರಾದ ಕಲ್ಲಪ್ಪ ಪಾಟೀಲ, ಮಾಜಿ ಪುರಸಭೆ ಸದಸ್ಯ ಶ್ರೀಶೈಲ ಗಾಣಿಗರ, ಬಾಲಗೌಡ ಪಾಟೀಲ, ಸಿದ್ದಪ್ಪ ಮಗದುಮ್, ಹೊನ್ನಪ್ಪ ಯಲಹಟ್ಟಿ, ವಿಠ್ಠಲ ಯಲಹಟ್ಟಿ, ಭೀಮಪ್ಪ ಪೂಜೇರಿ, ಈರಪ್ಪ ನಾಯ್ಕ, ರಂಗಪ್ಪ ಕುಚ್ಚನ್ನವರ, ಸುಭಾಸ ನಿಂಗಾಪೂರ, ಶಿವನಗೌಡ ಪಾಟೀಲ ಸೇರಿದಂತೆ ಅನೇಕ ಶ್ರೀರಾಮ ಭಕ್ತರು ಇದ್ದರು.