ಯಾದವಾಡ-ಮಾನೋಮ್ಮಿ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಚಾಲನೆ
ಮೂಡಲಗಿ: ಬಹಳ ದಿನಗಳ ಬೇಡಿಯಾಗಿದ ತಾಲೂಕಿನ ಯಾದವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಮಾನೋಮಿ-ಯಾದವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಯಾದವಾಡ ಬಳಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ ಅನುದಾನ ಯೋಜನೆ ಅಡಿಯಲ್ಲಿ ಶಾಸಕ ಹಾಗೂ ಬೆಮ್ಯೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ವಿಷೇಶ ಪ್ರಯತ್ನದಿಂದ 50 ಲಕ್ಷ ರೂ ವೆಚ್ಚದಲ್ಲಿ ಸೇತು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜಾ ಕಾರ್ಯಕ್ರಮ ರವಿವಾರ ಜರುಗಿತು.
ಈ ಸಮಯದಲ್ಲಿ ಯಾದವಾಡ ಗ್ರಾ.ಪಂ ಮಾಜಿ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ, ಬಿ.ಎಚ್.ಪಾಟೀಲ, ರಾಜುಗೌಡ ಪಾಟೀಲ, ಮಾನೋಮ್ಮಿಯ ಶ್ರೀ ಸಿದ್ದೇಶ್ವರ ಮಹಾರಾಜರು, ಹನುಮಂತ್ ಮೋಡಿ, ಗೋವಿಂದ ಉದುಪುಡಿ, ಬಸಪ್ಪ ಲಕ್ಷಾಣಿ, ಸಿದ್ದಪ್ಪ ಪೂಜಾರಿ, ಬಸವರಾಜ್ ಕೆರೆ, ಮುತ್ತಪ್ಪ ಕುರಿ, ಮಲ್ಲಪ್ಪ ಚಿಪ್ಪಲಕಟ್ಟಿ, ಬಸು ಹಿಡಕಲ್, ಶಂಕರ್ ಬೆಳಗಲಿ ಡಾ. ಶಿವನಗೌಡ ಪಾಟೀಲ್, ಬಸಪ್ಪ ಪೂಜಾರಿ, ಬೀರಪ್ಪ ಪೂಜಾರಿ, ಬಸವರಾಜ ಮಾಸರೆಡ್ಡಿ ಮತ್ತಿತರು ಇದ್ದರು.