ಮೂಡಲಗಿ: ಪಟ್ಟಣದ ಲಯನ್ಸ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ವಿ ಬಿ ಸೋನವಾಲ್ಕರ್ ಆಂಗ್ಲ ಮಾಧ್ಯಮ ಶಾಲೆ, ಶ್ರೀ ಬಿ ವಿ ಸೋನವಾಲ್ಕರ್ ಪಬ್ಲಿಕ್(ಸಿಬಿಎಸ್‍ಇ) ಶಾಲೆ ಹಾಗೂ ಶಿವರಾಮದಾದಾ ಕನ್ನಡ ಮಾಧ್ಯಮ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ದಿ.ವೀರಣ್ಣ ಈಶ್ವರಪ್ಪ ಹೊಸೂರ ಇವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಬುಧವಾರ ಮೇ.14 ರಂದು ರಕ್ತದಾನ ಶಿಬಿರ ಮತ್ತು ಪ್ರತಿಭಾ ಶೋಧ ಪರೀಕ್ಷೆಯ ಹಮ್ಮಿಕೊಳ್ಳಲಾಗಿದೆ ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಬಸವನಗದಲ್ಲಿನ ಶ್ರೀ ಬಿ.ವಿ.ಸೋಂವಾಲ್ಕರ್ ಪಬ್ಲಿಕ್ ಶಾಲೆಯಲ್ಲಿ ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರ, ಲಕ್ಷ್ಮೀನಗರದಲ್ಲಿ ಶಿವರಾಮದಾದಾ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಒಂದರಿಂದ 10ನೆಯ ತರಗತಿಗಳಿಗೆ ಪ್ರವೇಶ ಬಯಸುವ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡುವ ಯೋಜನೆ, ಪ್ರತಿಭಾ ಶೋಧ ಪರೀಕ್ಷೆಯ ಮೂಲಕ ಆಂಗ್ಲ ಮಾಧ್ಯಮ ಹಾಗೂ ಸಿ.ಬಿ.ಎಸ್.ಇ ಶಾಲೆಗಳಿಗೆ ಆಯ್ಕೆ ಮಾಡಲಾಗುವುದು ಕಾರಣ ಮುಡಲಗಿ ಮತ್ತು ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಮೊ.8123080781ಕ್ಕೆ ಸಂಪರ್ಕಿಸ ಬಹುದು.