Breaking News
Home / ಬೆಳಗಾವಿ / ಗ್ರಾ.ಪಂ ಕಟ್ಟಡ ಮತ್ತು ಹೇಮರಡ್ಡಿ ಮಲ್ಲಮ್ಮ ವೃತ್ತ ಉದ್ಘಾಟನ

ಗ್ರಾ.ಪಂ ಕಟ್ಟಡ ಮತ್ತು ಹೇಮರಡ್ಡಿ ಮಲ್ಲಮ್ಮ ವೃತ್ತ ಉದ್ಘಾಟನ

Spread the love

ಮೂಡಲಗಿ: ತಾಲೂಕಿನ ಯಾದವಾಡ ಬಳಿಯ ಕಾನಕಟ್ಟಿಯ ಗ್ರಾಮ ಪಂಚಾಯತ ಕಾರ್ಯಾಲಯ ನೂತನ ಕಟ್ಟಡ ಹಾಗೂ ಶಿವರಣೆ ಹೇಮರಡ್ಡಿ ಮಲ್ಲಮ್ಮ ನೂತನ ವೃತ್ತ ಉದ್ಘಾಟನೆ ಹಾಗೂ ತಾಲೂಕಾ ಮಟ್ಟದ ಮಹಾಸಾದ್ವಿ ಶ್ರೀ ಹೇಮರಡ್ಡಿ ಮಲ್ಲಮ್ಮಳ 603ನೇ ಜಯಂತ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ಮೇ.14 ರಂದು ಕಾಮನಕಟ್ಟಿ ಗ್ರಾ.ಪಂ ಕಾರ್ಯಾಲಯ ಆವರಣದಲ್ಲಿ ಏರ್ಪಡಿಸಲಾಗಿದೆ ಸಂಘಟಕರು ಪ್ರಕಟನೆಯ ತಿಳಿಸಿದ್ದಾರೆ.

ಬುಧವಾರ ಮುಂಜಾನೆ 7+30ರಿಂದ 9 ಗಂಟೆವರಿಗೆ ಕುಂಭ ಹಾಗೂ ವಾದ್ಯ ಮೆಳಗಳೊಂದಿಗೆ ಮೂರ್ತಿ ಮೆರವಣಿಗೆ, 9 ರಿಂದ 11 ಗಂಟೆವರೆಗೆ ಮಹಾರುದ್ರಾಭಿಷೇಕ ಹಾಗೂ ಮೂರ್ತಿ ಪ್ರತಿಷ್ಠಾಪಣೆ , ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಜರುಗುವುದು.
ಸಂಜೆ 4 ಗಂಟೆಗೆ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಎರೆಹೊಸಳ್ಳಿಯ ಶ್ರೀ ಮಹಾಯೋಗಿ ವೇಮನ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವೇಮನಾನಂದ ಮಹಾಸ್ವಾಮಿಗಳು, ಸಾನ್ನಿಧ್ಯವನ್ನು ತೊಂಡಿಕಟ್ಟಿಯ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು, ಯಾದವಾಡದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿ ವಹಿಸುವರು, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು, ಕಾನೂನು ಮತ್ತು ಪ್ರವಾಸೋಧ್ಯಮ ಹಾಗೂ ಸಂಸದೀಯ ವ್ಯವಹಾರಗಳ ಸಚಿಚ ಎಚ್.ಕೆ.ಪಾಟೀಲ ಸಮಾರಂಭ ಉದ್ಘಾಟಿಸುವರು, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮೂರ್ತಿ ಅನಾವರಣ ನೆರವೇರಿಸುವರು, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗ್ರಾ.ಪಂ ಕಾರ್ಯಾಲಯ ಉದ್ಘಾಟಿಸುವರು, ವಿಶೇಷ ಆಹ್ವಾನಿತರಾಗಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ, ಬೆಂಗಳೂರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ, ಕಾಮನಕಟ್ಟಿ ಗ್ರಾ.ಪಂ ಅಧ್ಯಕ್ಷೆ ಶಾಂತವ್ವ ಮೋಡಿ, ತಾ.ಪಂ ಇಒ ಎಫ್.ಜಿ.ಚಿನನ್ನವರ, ಬಿಇಒ ಅಜೀತ ಮನ್ನಿಕೇರಿ, ತಾ.ಪಂ ಸಹಾಯಕ ನಿರ್ದೇಶಕರಾದ ಎಸ್.ಎಸ್.ರೋಡ್ಡನ್ನವರ, ಸಿ.ಎಸ್.ಬಾರ್ಕಿ, ಪಿಡಿಒ ಎಚ್.ವಾಯ್.ತಾಳಿಕೋಟಿ, ಅಭಿಯಂತರಾದ ಸುರೇಶ ಹೂಗಾರ, ಎಸ್.ಎಸ್.ಪಾಟೀಲ ಮತ್ತು ಅತಿಥಿಗಲಾಗಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರು, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸುವರು.
ಗಲಗಲಿ ಎನ್.ಇ.ಎಚ್.ಎಸ್ ಶಿಕ್ಷಕಿ ಸರಳಾ ಸಿಂಗರಡ್ಡಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಿಲ್ಲಾ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಅತಿಥಿ ಉಪನ್ಯಾಸ ನೀಡುವರು.


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ