ಮೂಡಲಗಿ: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ತಾಲೂಕಾ ಘಟಕ ಹಾಗೂ ಸ್ನೇಹ ಸಂಕುಲ ಮೂಡಲಗಿ ಸಹಯೋಗದಲ್ಲಿ ಡಾ.ಮಹಾದೇವ ಜಿ.ಜಿಡ್ಡಿಮನಿ ಅವರ “ಗುರುಶಿಷ್ಯರ ಆತ್ಮಸಖ್ಯ” ಮತ್ತು “ಮಿತ್ರಸಂಮಿತ” ಎರಡು ಕೃತಿಗಳ ಬಿಡುಗಡೆ ಸಮಾರಂಭ ಶುಕ್ರವಾರ ಮೇ.16 ಮುಂಜಾನೆ 10 ಗಂಟೆಗೆ ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಸೊಸೈಟಿ ಸಭಾ ಭವನದಲ್ಲಿ ಜರುಗಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕುರುಹಿನಶೆಟ್ಟಿ ಸೊಸೈಟಿಯ ಅಧ್ಯಕ್ಷ ಸುಭಾಸ ಬೆಳಕೂಡ ವಹಿಸುವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಸಮಾರಂಭ ಉದ್ಘಾಟಿಸುವರು, ಅತಿಥಿಗಳಾಗಿ ಪ್ರೊ. ಚಂದ್ರಶೇಖರ ಅಕ್ಕಿ, ಡಾ.ಸಂಜಯ ಶಿಂಧಿಹಟ್ಟಿ, ವೀರಯ್ಯಾ ಮಠಪತಿ ಚಿದಾನಂದ ಹೂಗಾರ ಸೇರಿದಂತೆ ಅನೇಕ ಭಾಗವಹಿಸುವರು
IN MUDALGI Latest Kannada News