ಮೂಡಲಗಿ: ಆರ್ಥಿಕ ಸಂಕಷ್ಟದಲ್ಲಿರುವ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯ ನರ್ಚರ ಮೆರಿಟ್ ಯೋಜನೆಯಡಿಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗಾಗಿ ಆರ್ಥಿಕ ನೆರವನ್ನು ನೀಡಲಿದೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಮಾರ್ಚ 2025ರಲ್ಲಿ ಮೊದಲ ಬಾರಿ ಬರೆದು ಶೇ.80ರಷ್ಟು ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿರಬೇಕು. ಪಿಯುಸಿ ಮೊದಲನೇ ವರ್ಷದ ವಾಣಿಜ್ಯ ಮತ್ತು ಡಿಪ್ಲೋಮಾ ಕೋರ್ಸಗೆ ಸೇರಲು ಬಯಸುವ ವಿದ್ಯಾರ್ಥಿಗಳು ಮಾತ್ರ ಅರ್ಜಿಯನ್ನು ಹಾಕಲು ಅರ್ಹರು. ಕುಟುಂಬದ ವಾರ್ಷಿಕ ವರಮಾನ ರೂ.1.20 ಲಕ್ಷಕ್ಕಿಂತ ಕಡಿಮೆ ಇರಬೇಕು. ವಿದ್ಯಾರ್ಥಿಗಳ ಪಾಲಕರು, ಪೋಷಕರು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ, ವಿಜಯಪುರ, ಬಾಗಲಕೋಟ, ದಾವಣಗೆರೆ, ಕೊಪ್ಪಳ ಜಿಲ್ಲೆಗಳಲ್ಲಿ ವಾಸವಿರಬೇಕು.
ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು ವಿದ್ಯಾಪೋಷಕ ವೆಬ್‍ಸೈಟ್‍ನಲ್ಲಿ (www.vidyaposhak.ngo) ಆನ್‍ಲೈನ್‍ದಲ್ಲಿ ತುಂಬಿ, ಮಾಹಿತಿಗಳೊಂದಿಗೆ ಜೂನ್ 10, 2025ರ ಒಳಗಾಗಿ ಅಪ್‍ಲೋಡ್ ಮಾಡಬೇಕು.
ಅಧಿಕ ಮಾಹಿತಿಗಾಗಿ ದಾರವಾಡದ ವಿದ್ಯಾಪೋಷಕ ಕಚೇರಿ ಪೋನ್ ಸಂಖ್ಯೆ: 0836-2747357 ಸಂಪರ್ಕಿಸಲು ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾ ಕಾರ್ಯನಿರ್ವಾಹಕಿ ರೇಣುಕಾ ಐರಾನಿ ಮೊ. 9535370824 ಸಂಪರ್ಕಿಸಲು ವಿದ್ಯಾಪೋಷಕ ಮೂಡಲಗಿ ಹಿರಿಯ ಸ್ವಯಂ ಸೇವಕ ಬಾಲಶೇಖರ ಬಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News