ಮೂಡಲಗಿ : ಸಾಲ ಬಾಧೆಯಿಂದ ಬೇಸತ್ತು ನೇಕಾರ ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಾಗನೂರ ಪಟ್ಟಣದಲ್ಲಿ ಗುರುವಾರ ನಡೆದಿದೆ.
ನಾಗನೂರ ಪಟ್ಟಣದ ರಮೇಶ ಮರಿಜಾಡರ (37) ಎಂಬ ನೇಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಮೇಶ ನೇಕಾರಿಕೆ ಉದ್ಯೋಗಕ್ಕಾಗಿ ಸಾಲ ಮಾಡಿದ್ದರು. ಉದ್ಯೋಗ ಸರಿಯಾಗಿ ನಡೆಯದೇ ನಷ್ಟ ಅನುಭವಿಸಿದ್ದರು. ಸಾಲಬಾಧೆಯಿಂದ ಬೇಸತ್ತಿದ್ದರು ಎನ್ನಲಾಗುತ್ತಿದೆ. ಗುರುವಾರ ಮುಂಜಾನೆ ನೇಕಾರಿಕೆ ಮಾಡುವ ಶೇಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಮೂಡಲಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
