ಮೂಡಲಗಿ: ಸರ್ಕಾರ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಾಲಕ-ಪೋಷಕರು ಸದುಪಯೋಗ ಪಡಿಸಿಕೊಂಡು ಮಕ್ಕಳಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ ಹೇಳಿದರು.
ಶುಕ್ರವಾರದಂದು ಪಟ್ಟಣದ ಶತಮಾನ ಪೂರೈಸಿದ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ ಪ್ರಾರಂಭೋತ್ಸವದ ಕಾರ್ಯಕ್ರಮದ ಸರಸ್ವತಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಮಾತನಾಡಿದ ಅವರು, ಸರಕಾರ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದರು .
ಸಿಡಿಪಿಒ ಯಲ್ಲಪ್ಪ ಗದಾಡಿ ಮಾತನಾಡಿ, ಮಕ್ಕಳು ಸಮಗ್ರ ಹಾಗೂ ಭಾವನಾತ್ಮಕವಾಗಿ ಕಲಿಯ ಬೇಕಾದರೆ ಸರಕಾರಿ ಶಾಲೆಯಲ್ಲಿ ಮಾತ್ರ, ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರ ಪ್ರಯತ್ನ ಅವಶ್ಯಕವಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಮಾತನಾಡಿ, ಖಾಸಗಿ ಶಾಲೆಯಲ್ಲಿ ನಡೆಸುತ್ತಿ ಕಾರ್ಯ Zಟುವಟಿಕೆಯನ್ನು ಸರಕಾರಿ ಶಾಲೆಯಲ್ಲೂ ಶಿಕ್ಷಕರು ಸಹ ಕಾರ್ಯರೂಪಕ್ಕೆ ತರಬೇಕೆಂದ ಅವರು ಶಾಲೆಯ ಮೂಲಭೂತ ಸೌಕರ್ಯವನ್ನು ಒದಗಿಸುವದಾಗಿ ಬರವಸೆ ನೀಡಿದರು..
ಸಾಹಿತಿ ಬಾಲಶೇಖರ ಬಂದಿ ಮಾತನಾಡಿ, ಇಂದು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸರಕಾರಿ ಮಕ್ಕಳು ಮುಂದು ಇದ್ದರೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡುವ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.
ಭವ್ಯ ಪ್ರಾರಂಭೋತ್ಸ: ಪಟ್ಟಣದ ಶತಮಾನ ಪೂರೈಸಿದ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆಯಲ್ಲಿ ತಳಿರು ತೋರಣಗಳಿಂದ ಶಾಲೆಗಳನ್ನು ಅಲಂಕರಿಸಿ ಪ್ರಾರಂಭದ ದಿನವೇ ತಹಶೀಲ್ದಾರ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಶಾಲೆಯವರೆಗೂ ಕರೆ ತರುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಮೆರಗು ತಂದುಕೊಡಲಾಯಿತು.
ಪಟ್ಟಣದ ಪುರಸಭೆ ಮುಂಭಾಗದಲ್ಲಿ ಜಾನಪದ ಸಂಸ್ಕøತಿಯ ಪ್ರತೀಕವಾದ ಎತ್ತಿನ ಗಾಡಿಯನ್ನು ಏರಿದ ಅಧಿಕಾರಿಗಳು ಹಾಗೂ ಮಕ್ಕಳು ‘ಸರ್ಕಾರಿ ಶಾಲೆಗೆ ಹೋಗೋಣ ಬನ್ನಿ’, ‘ಸರ್ಕಾರಿ ಶಾಲೆ ನಮ್ಮ ಹೆಮ್ಮೆ’, ‘ಸರ್ಕಾರಿ ಶಾಲೆ ನಮ್ಮೂರ ಶಾಲೆ’, ‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸೋಣ ಬನ್ನಿ’, ‘ಶಿಕ್ಷಣವೇ ಶಕ್ತಿ’ ಎಂಬಿತ್ಯಾದಿ ಘೋಷಣೆಗಳ ಫಲಕಗಳನ್ನು ಹಿಡಿದು ಸಂಭ್ರಮದಿಂದ ಶಾಲೆಗೆ ಆಗಮಿಸಿದರು.
ಸಮಾರಂಭದಲ್ಲಿ ತಾಪಂ ಇಒ ಎಫ್ ಜಿ ಚಿನ್ನ ನವರ, ಪಿಎಸ್‍ಐ ಬಿ ಎಚ್ ಕುಂಬಾರ, ಬಿಆರ್‍ಸಿ ಅಧಿಕಾರಿ ರೇಣುಕಾ ಆನಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಿಚ್ಚು ಝoಡೆಕುರುಬರ, ಪುರಸಭೆ ಸದಸ್ಯರ ಅಬ್ದುಲಗಫಾರ್ ಡಾಂಗೆ, ಮುಖಂಡರಾದ ಮರೆಪ್ಪ ಮರೆಪ್ಪಗೋಳ, ಅನ್ವರ್ ನದಾಫ್, ರಮೇಶ ಸಣ್ಣಕ್ಕಿ, ನನ್ನು ಶೇಖ, ಉರ್ದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಖ್ವಾಜಾ ಅತ್ತಾರ, ಶಾನೂರ ದಬಾಡಿ, ಈರಪ್ಪ ಢವಳೇಶ್ವರ, ಸಂಜು ಕಮತೆ, ಮಾರುತಿ ಹಡಪದ, ಶ್ರೀಕಾಂತ, ಮುಖ್ಯ ಶಿಕ್ಷಕ ಸುರೇಶ ಕೋಪರ್ಡೆ ಹಾಗೂ ಶಿಕ್ಷಕರು ಮತ್ತು ಶಾಲಾ ಮಕ್ಕಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.