ಮೂಡಲಗಿ : ಪ್ರಕೃತಿಯನ್ನು ಉಳಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ, ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಅಧ್ಯಕ್ಷರು ಹಾಗೂ ಸಾಲು ಮರದ ಸಿದ್ದಣ್ಣ ಖ್ಯಾತಿಯ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು.
ಅವರು ಸಮೀಪದ ಖಾನಟ್ಟಿಯ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡವನ್ನು ನೆಟ್ಟು ನೀರು ಉಣಿಸಿ ಮಾನವನ ಮನುಕುಲದ ಉಳುವಿಗಾಗಿ ಸಸಿಗಳನ್ನು ನೆಟ್ಟು ಅವುಗನ್ನು ನಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಸುಂದರ ಪರಿಸರ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಆರ್ ಎಸ್ ಹುನ್ನೂರ ಮಾತನಾಡಿ ಮನೆಗೊಂದು ಮರ ಉರಿಗೊಂದು ವನ ಇನ್ನುವಂತೆ ಪ್ರತಿಯೊಬ್ಬರೂ ಗಿಡಗನ್ನು ಬೆಳಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲೆಯ ಗುರುಗಳಾದ ಆರ್ ಬಿ ವಾಲಿಕಾರ, ಎ ಎಸ್ ಪಾಟೀಲ್, ಪಿ ಬಿ ಕುಲಕರ್ಣಿ, ಎನ್ ಡಿ ನಿಡೋಣಿ, ಆರ್ ಬಿ ಹೋನವಾಡ, ಎಲ್ ಪಿ ಪಾಟೀಲ್, ಎ ಕೆ ಸುಣದೊಳಿ, ಆರ್ ಎಸ್ ಮಡಿವಾಳರ, ಆರ್ ಎಸ್ ಕಮತೆ, ಎಸ್ ಎಸ್ ತೇಲಿ, ಶ್ರೀಮತಿ ಸಂಗೀತಾ ಸಿಂತ್ರೆ, ಚಂದ್ರಿಕಾ ಪಾಟೀಲ್, ಮಹಾನಂದಾ ಹೊಸವಾಲಿಕಾರ, ಮಾಲಾ ಪಾರ್ಸಿ, ಪ್ರಿಯಾಂಕಾ ಕರಗಣ್ಣಿ ಮುಂತಾದವರು ಉಪಸ್ಥಿತರಿದ್ದರು.