ಮೂಡಲಗಿ: 2024-25ನೇ ಸಾಲಿನ ಮಳೆ ಪರಿಹಾರ ಅನುದಾನ ಅಡಿಯಲ್ಲಿ ಮೂಡಲಗಿ ಶಿವಬೋಧರಂಗ ಮಠದಿಂದ ರಂಗಾಪೂರ ಕೂಡುರಸ್ತೆಯ ವರೆಗಿನ ಅರ್ಧ ಕಿ.ಮೀ. ವರೆಗೆ 60 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿವಬೋಧರಂಗ ಮಠದ ಪೀಠಾಧಿಪತಿದತ್ತಾತ್ರಯಬೋಧ ಸ್ವಾಮೀಜಿ ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವ ನಾಯಕ ಸರ್ವೋತ್ತಮ ಜಾರಕಹೊಳಿ ಅವರು ಮಾತನಾಡಿ, ಬಹಳ ದಿನಗಳ ಬೇಡಿಕೆಯಾಗಿದ್ದ ಮೂಡಲಗಿ-ರಂಗಾಪೂರ-ಮುನ್ಯಾಳ ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ದಿಯ ಕಾರ್ಯಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಗಮನಹರಿಸಿ ಅನುದಾನವನ್ನು ಬಿಡುಗಡೆ ಗೋಳಿಸಿದ್ದಾರೆ. ಈ ರಸ್ತೆ ಅಭಿವೃದ್ಧಿಯಿಂದ ಮುನ್ಯಾಳ, ರಂಗಾಪೂರ, ಕಮಲದಿನ್ನಿ ಹಾಗೂ ಇತರೆ ಗ್ರಾಮಗಳಿಗೆ ಸಂಚರಿಸುವರಿಗೆ ಅನೂಕಲವಾಗುವುದು ಎಂದರು.
ಈ ಸಮಯದಲ್ಲಿ ಪುರಸಭೆ ಅಧ್ಯಕ್ಷೆ ಖುμರ್Áದ ಅನ್ವರ ನದಾಪ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಪುರಸಭೆ ಸದಸ್ಯರಾದ ರವೀರಿದ್ರ ಸಣ್ಣಕ್ಕಿ, ಆನಂದ ಟಪಾಲದಾರ, ಶಿವು ಸಣ್ಣಕ್ಕಿ, ರವಿ ಮೂಡಲಗಿ, ಲಕ್ಕಪ್ಪ ಶಾಬನ್ನವರ, ವೀರಪಾಕ್ಷಿ ಮುಗಳಖೋಡ, ಬಿಜೆಪಿ ಅರಬಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಗಣ್ಯರಾದ ರವಿ ಸೋನವಾಲಕರ, ಈರಪ್ಪ ಬನ್ನೂರ, ರಾಮಣ್ಣ ಹಂದಿಗುಂದ, ಮರಿಯಪ್ಪ ಮರೆಪ್ಪಗೋಳ, ಗಿರೀಶ ಢವಳೇಶ್ವರ, ಅನ್ವರ ನದಾಫ, ರಾಜು ಪೂಜೇರಿ, ಈಶ್ವರ ಕಂಕಣವಾಡಿ, ಮಲ್ಲಪ್ಪ ತೇರದಾಳ, ಬಸವರಾಜ ಪಾಟೀಲ ಮತ್ತಿತರು ಇದ್ದರು.