ಮೂಡಲಗಿ: ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ 5.85 ಕೋಟಿ ರೂ. ನಿವ್ವಳ ಲಾಭವನ್ನು ಪಡೆದು ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ಸುಭಾಸ ಬೆಳಕೂಡ ಅವರು ಹೇಳಿದರು.
ಪಟ್ಟಣದ ಕುರುಹಿನಶೆಟ್ಟಿ ಅರ್ಬನ್‍ಕೋ-ಆಪ್ ಕ್ರೆಡಿಟ್ ಸೊಸೈಟಿಯ 30 ನೇ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ಮಾರ್ಚ ಅಂತ್ಯಕ್ಕೆ ಶೇರು ಬಂಡವಾಳ 4.28 ಕೋಟಿರೂ. ಠೇವುಗಳು 299.72 ಕೋಟಿರೂ, ನಿಧಿಗಳು 27.34 ಕೋಟಿ ರೂ, ವಿವಿಧ ಸಾಲಗಳು 193.66 ಕೋಟಿ ರೂ.ವಿತರಿಸಿ, ದುಡಿಯುವ ಬಂಡವಾಳ 345.17 ಕೋಟಿರೂ ಹೊಂದಿದು. ಈಗಾಗಲೇ 17 ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳು ಪ್ರಗತಿಯತ್ತ ಸಾಗುತ್ತಿವೆ ಎಂದು ತಿಳಿಸಿದರು.
ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಮಾತನಾಡಿದರು. ಪಟ್ಟಣದ ನೀಲಕಂಠ ಮಠದ ಶ್ರೀ ಶಿವಾನಂದ ಸ್ವಾಮಿಗಳು ಸಾನಿಧ್ಯ ವಹಿಸಿ, ಆಶಿರ್ವಚನ ನೀಡಿದರು.
ಸಂಘದ ಉಪಾಧ್ಯಕ್ಷ ಐ.ಎಮ್.ಕಳ್ಳಿಮನಿ ನಿರ್ದೇಶಕರಾದ ಬಿ.ಸಿ.ಮೂಗಳಖೋಡ, ಎಲ್.ಎಲ್.ಪೂಜೇರಿ, ಜಿ.ಕೆ.ಮುರಗೋಡ, ಬಿ.ಬಿ.ಬೆಳಕೂಡ, ವಿ.ಎಸ್.ಶೀಲವಂತ, ಆರ್.ಡಿ.ಬಳೆಗಾರ, ಉಮಾ ಬೆಳಕೂಡ, ಶಾಂತವ್ವಾ ಬೋರಗಲ್. ರುಕ್ಮವ್ವಾ ಪೂಜೇರಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ, ಶಂಕ್ರಯ್ಯ ಹಿರೇಮಠ, ಧಶರಥ ಹುಲಕುಂದ ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ರಮೇಶ ವಂಟಗೂಡಿ ಸ್ವಾಗತಿಸಿದರು. ಚಂದ್ರಕಾಂತ ಕೊಡತೆ ನಿರೂಪಿಸಿದರು. ಶಿವಾನಂದ ಮುರಗೋಡ ವಂದಿಸಿದರು.
oplus_0
IN MUDALGI Latest Kannada News