Breaking News
Home / ಬೆಳಗಾವಿ / ಬಸವೇಶ್ವರ ಅರ್ಬನ್ ಸೊಸಾಯಿಟಿ ಸೇವೆ ಅತ್ಯುತ್ತಮ- ಶಿವಾನಂದ ಲೋಕನ್ನವರ

ಬಸವೇಶ್ವರ ಅರ್ಬನ್ ಸೊಸಾಯಿಟಿ ಸೇವೆ ಅತ್ಯುತ್ತಮ- ಶಿವಾನಂದ ಲೋಕನ್ನವರ

Spread the love

ಮೂಡಲಗಿ: ಮೂಡಲಗಿಯ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಸಾರ್ವಜನಿಕರು ಸೊಸಯಿಟಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೌಜಲಗಿ ಜ್ಞಾನಗಂಗೋತ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಂದ ಲೋಕನ್ನವರ ಹೇಳಿದರು.
          ಕೌಜಲಗಿ ಪಟ್ಟಣದಲ್ಲಿ ಬುಧವಾರ ಹುಲಕುಂದ ರಸ್ತೆಯ ಹುನ್ನೂರ ವಾಣಿಜ್ಯ ಮಳಿಗೆಯಲ್ಲಿ ಮೂಡಲಗಿಯ ಶ್ರೀ ಬಸವೇಶ್ವರ ಅರ್ಬನ್ ಸೊಸಾಯಿಟಿ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಕೋಟ್ಯಂತರ ವಹಿವಾಟು ನಡೆಸುವ ಮೂಲಕ ಗ್ರಾಹಕರಿಗೆ-ರೈತರಿಗೆ ಆರ್ಥಿಕವಾಗಿ ಸದೃಢವಾಗಿಸಲು ಸೊಸಾಯಿಟಿ ಶ್ರಮಿಸಿದ್ದು, ಕೌಜಲಗಿಯಲ್ಲಿ ತನ್ನ 16ನೆಯ ಶಾಖೆಯನ್ನು ಆರಂಭಿಸುವ ಮೂಲಕ ಕೌಜಲಗಿ ಭಾಗದ ಗ್ರಾಹಕರಿಗೆಲ್ಲ ಆರ್ಥಿಕ ಸದೃಢತೆ ಉಂಟುಮಾಡಲು ಬಸವೇಶ್ವರ ಸೊಸಾಯಿಟಿ ನಿರ್ಧರಿಸಿದೆ ಎಂದರು
ಸಾನಿಧ್ಯ ವಹಿಸಿದ್ದ ಅರಭಾವಿಯ ಶ್ರೀ ಗುರುಬಸವಲಿಂಗ ಸ್ವಾಮೀಜಿ, ಸುಣದೋಳಿಯ ಶಿವಾನಂದ ಸ್ವಾಮೀಜಿ, ಕೌಜಲಗಿಯ ಶ್ರೀಕಾಂತಯ್ಯ ವಿರಕ್ತಮಠ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ  ಬಸವೇಶ್ವರ ಅರ್ಬನ್ ಸೊಸಾಯಿಟಿಯ ಪ್ರಧಾನ ಕಚೇರಿ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ, ಉಪಾಧ್ಯಕ್ಷ ರವೀಂದ್ರ ಭಾಗೋಜಿ, ನಿರ್ದೇಶಕರಾದ ಚನ್ನಬಸು ಬಡ್ಡಿ, ಬಸವರಾಜ ತೇಲಿ, ಗಿರೀಶ ಢವಳೇಶ್ವರ, ಕೌಜಲಗಿ ಶಾಖೆಯ ಸಲಹಾ ಸಮಿತಿಯ ಅಧ್ಯಕ್ಷ ಹೊಳೆಪ್ಪ ಯಲಿಗಾರ, ಉಪಾಧ್ಯಕ್ಷ ವಿಜಯ ಲೋಕನ್ನವರ, ಶ್ರೀಶೈಲ ಗಾಣಿಗೇರ, ಶಂಕರ ಚಚಡಿ, ಜಗದೀಶ ದಳವಾಯಿ, ಕರೆಪ್ಪ ಬಿಸಗುಪ್ಪಿ, ರಮೇಶ ನರಸನ್ನವರ, ಕುತುಬ್ ಮುಲ್ತಾನಿ, ಈರಪ್ಪ ನಾಯ್ಕರ  ಸೊಸಾ ಯಿಟಿ ಪ್ರಧಾನ ಕಾರ್ಯದರ್ಶಿ ಬಸವರಾಜ ಬಡಿಗೇರ, ಕೌಜಲಗಿ ಶಾಖೆಯ ಕಾರ್ಯದರ್ಶಿ ರಮೇಶ್ ಗೋಡಿಗೌಡರ ಮತ್ತಿತರು ಉಪಸ್ಥಿತರಿದ್ದರು.

Spread the love

About inmudalgi

Check Also

ರಾಜ್ಯದಲ್ಲಿ ಉಪ್ಪಾರ ಸಮುದಾಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ – ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ

Spread the loveಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಉಪ್ಪಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ