Breaking News
Home / Recent Posts / ಕೆ.ಎಚ್.ಎಸ್ ಸರಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಚಾಲನೆ

ಕೆ.ಎಚ್.ಎಸ್ ಸರಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಚಾಲನೆ

Spread the love

ಕೆ.ಎಚ್.ಎಸ್ ಸರಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆ ಚಾಲನೆ

ಮೂಡಲಗಿ: ಪ್ರತಿಯೊಂದು ಜೀವಿಗೆ ಸಹಿತ ಬದುಕುವು ಮತ್ತು ಬದುಕಿಗೆ ಆಧಾರವಾಗಿರುವುದೆ ಆಹಾರ, ದೇಶ ಮಕ್ಕಳ ಆರೋಗ್ಯ ಮತ್ತು ಬಧುಕಿನ ಭವಿಷ್ಯನಲ್ಲಿ ನಿಜವಾದ ನಗೆ ಬರುವುದಕ್ಕೆ ಚೇತನ್ಯ ವಸ್ತು ಆಹಾರ, ಬಿಸಿ ಊಟದ ಮಹತ್ವಕಾಂಕ್ಷೆಯ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಚಿಕ್ಕೋಡಿ ಡಯಟ ಪ್ರಾಚಾರ್ಯ ಮೋಹನ ಜೀರಗಾಳ ಹೇಳಿದರು.

ಅವರು ಪಟ್ಟಣದ ಕೆ.ಎಚ್.ಸೋನವಾಲ್ಕರ ಸರಕಾರಿ ಪ್ರೌಢ ಶಾಲೆಯಲ್ಲಿ ಸರಕಾರದ ಜಾರಿಗೆ ತಂದಿರುವ ಪ್ರಸಕ್ತ ಸಾಲಿನ ಅಕ್ಷರದಾಸೋಹದ ಮದ್ಯಾಹ್ನದ ಬಿಸಿಊಟದ ಯೋಜನೆಗೆ ಚಾಲನೆ ಮಾತನಾಡಿ. ಕೆ.ಎಸ್.ಸೋನವಾಲ್ಕರ ಸರಕಾರಿ ಪ್ರೌಢ ಶಾಲೆಗೆ ಶಿಘ್ರದಲ್ಲಿಯೇ ಸುಮಾರು 20 ಗಣಯಂತ್ರಗಳನ್ನು ನೀಡುವದಾಗಿ ಹೇಳಿದರು.
ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ ಮಾತನಾಡಿ, ಸರಕಾರದ ಜಾರಿಗೆ ತಂದಿರುವ ಅಕ್ಷರದಾಸೋಹ ಮತ್ತು ಕ್ಷೀರ ಭಾಗ್ಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಭೂದಾನಿ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ ಕೆ.ಸೋನವಾಲ್ಕರ ವಹಿಸಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಇಒ ಅಜೀತ ಮನ್ನಿಕೇರಿ,ದೈಹಿಕ ಶಿಕ್ಷಣಾಧಿಕಾರಿ ಜುನೇದ ಪಟೇಲ, ಪುರಸಭೆ ಸದಸ್ಯ ಎ.ಐ.ಡಾಂಗೆ, ಶಾಲಾ ಮುಖ್ಯೋಪಾದ್ಯಾಯ ಎಮ್.ಎಮ್.ದಬಾಡಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಅಲ್ತಾಪ್ ಹವಾಲ್ದಾರ, ಅನ್ವರ ನದಾಫ್, ಪ್ರಕಾಶ ಮುಗಳಖೋಡ ಮತ್ತಿತರು ಇದ್ದರು. ಶಿಕ್ಷಕ ಎ.ಆರ್.ಕುರಬರ ಸ್ವಾಗತಿಸಿ ನಿರೂಪಿಸಿದರು.

 

 


Spread the love

About inmudalgi

Check Also

ರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ

Spread the loveರೈತರು ಭಾರತದ ಆರ್ಥಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ: ಸಂಸದ ಕಡಾಡಿ ಮೂಡಲಗಿ: ಸಹಕಾರಿ ಸಂಸ್ಥೆಗಳ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ