Breaking News
Home / ಬೆಳಗಾವಿ / ನ.12ರಿಂದ ನ.16ರ ವರೆಗೆ ಎಂಪಿಎಲ್-2025 ಕ್ರಿಕೆಟ್ ಟೂರ್ನಿ

ನ.12ರಿಂದ ನ.16ರ ವರೆಗೆ ಎಂಪಿಎಲ್-2025 ಕ್ರಿಕೆಟ್ ಟೂರ್ನಿ

Spread the love

ಮೂಡಲಗಿ: ಮೂಡಲಗಿಯ ಮಾರ್ನಿಂಗ್ ಸ್ಟಾರ್ ಕ್ರಿಕೆಟರ್ಸ ಹಾಗೂ ಲಯನ್ಸ ಕ್ಲಬ್ ಮೂಡಲಗಿ ಪರಿವಾರ ಇವರ ಸಹಯೋಗದಲ್ಲಿ ಇದೇ ನ. 12ರಿಂದ ನ.16ರ ವರೆಗೆ 5 ದಿನಗಳ ವರೆಗೆ ಎಸ್‍ಎಸ್‍ಆರ್ ಕಾಲೇಜು ಮೈದಾನದಲ್ಲಿ ಮೂಡಲಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಾಮೆಂಟ್‍ವನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರಾದ ಶಿವಾನಂದ ಗಾಡವಿ, ಮಲ್ಲು ಕುರಬಗಟ್ಟಿ ಹಾಗೂ ಸನ್ನಿತ ಸೋನವಾಲಕರ ಹೇಳಿದರು.

ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಇಡಲಾಗಿದ್ದು,
ಪ್ರಥಮ ಬಹುಮಾನ ರೂ.51,001, ದ್ವಿತೀಯ ರೂ.30,001 ಹಾಗೂ ತೃತೀಯ ರೂ.20,001 ನಗದು ಬಹುಮಾನಗಳೊಂದಿಗೆ ಆಕರ್ಷಕ ಟ್ರೋಪಗಳನ್ನು ವಿಜೇತ ತಂಡಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಬಹುಮಾನಗಳ ಪ್ರಾಯೋಜಕತ್ವವನ್ನು ಕ್ರಮವಾಗಿ ಪ್ರಕಾಶ ಸೋನವಾಲಕರ, ಬಸವೇಶ್ವರ ಅರ್ಬನ್ ಕೋ.ಆಪ್ ಕೆಡಿಟ್ ಸೊಸೈಟಿತ ಆಡಳಿತ ಮಂಡಳಿ ಹಾಗೂ ಶ್ರೀಶೈಲ್ ಮದಗನ್ನವರ ಇವರು ವಹಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಅತ್ಯುತ್ತಮ ಆಟಗಾರರಿಗೆ ಹಲವಾರು ವ್ಯಯಕ್ತಿ ಬಹುಮಾನಗಳನ್ನು ನೀಡಲಾಗುವುದು ಎಂದರು.
ಟೂರ್ನಾಮೆಂಟದ ಪ್ರಚಾರ ಪತ್ರಿಕೆಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಬಿಡುಗಡೆ ಮಾಡಿದರು.
ಬಾಲಶೇಖರ ಬಂದಿ, ಲಯನ್ಸ್ ಕ್ಲಬ್ ಅಧ್ಯಕ್ಷ ವಿಶಾಲ ಶೀಲವಂತ, ಗಿರೀಶ ಆಸಂಗಿ, ಕೃಷ್ಣಾ ಕೆಂಪಸತ್ತಿ, ವಿಶ್ವನಾಥ ಬೆಲ್ಲದ, ಪ್ರವೀಣ ಕುರಬಗಟ್ಟಿ, ಸೋಮು ಮಠಪತಿ, ಶೇಖರಯ್ಯ ಹಿರೇಮಠ, ಲಕ್ಕಪ್ಪ ತಳವಾರ, ಮಹೇಶ ಖಡಕಬಾವಿ, ಗಿರೀಶ ಮೇತ್ರಿ, ರವಿ ಪತ್ತಾರ, ಶಿವಬಸು ಭುಜನ್ನವರ ಮತ್ತಿತರರು ಇದ್ದರು.


Spread the love

About inmudalgi

Check Also

ಕನಕದಾಸರು ಕೇವಲ ವ್ಯಕ್ತಿಯಲ್ಲ, ಶೋಷಿತರ ಅತಿ ದೊಡ್ಡ ಧ್ವನಿ:ಬಸವಂತ ಕೋಣಿ

Spread the loveಬೆಟಗೇರಿ:ಕನಕದಾಸರು ಒಬ್ಬ ಕವಿಯಾಗಿ ಬೆಳೆದು, ಸಮಾಜ ಸುಧಾರಕನಾಗಿ, ಸಂತನಾಗಿ ಶಾಶ್ವತವಾಗಿ ಉಳಿದವರು ಎಂದು ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ