Breaking News
Home / ತಾಲ್ಲೂಕು / ರಾಯಬಾಗ ತಾಲೂಕಿನ ಇಟನಾಳ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮನಕಲುಕುವ ಘಟನೆ ನಡೆದಿದೆ

ರಾಯಬಾಗ ತಾಲೂಕಿನ ಇಟನಾಳ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮನಕಲುಕುವ ಘಟನೆ ನಡೆದಿದೆ

Spread the love

ಇಟನಾಳ : ಗ್ರಾಮದ ಹದ್ದಿನಲ್ಲಿ ಇರುವ ಮುಗಳಖೋಡ ಕೆನಾಲ್ ಕಚೇರಿ ಹತ್ತಿರ ಇರುವ ಬಸವಣ್ಣನ ದೇವಸ್ಥಾನದಲ್ಲಿ ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಆಗತಾನೆ ಜನಿಸಿದ ಹಸಿಕಂದಮ್ಮನನ್ನು (ಗಂಡುಮಗು) ಹಾಕಿರುವ ಅಮಾನವೀಯ ಘಟನೆ ನಡೆದಿದೆ.

ಆ ದೇವಸ್ಥಾನದ ಹತ್ತಿರ ಜನರು ಕೂಡುತ್ತಿದಂತೆ ಘಟನಾ ಸ್ಥಳಕ್ಕೆ ಆಶಾಕಾಯ೯ಕರ್ತೆಯರು, ಆರೋಗ್ಯ ಕೇಂದ್ರದ ನಸ್೯, ಆರಕ್ಷಕ ಠಾಣೆ ಸಿಬ್ಬಂದಿ ಭೇಟಿ ನೀಡಿ ಆ ಕಂದಮ್ಮನ ರಕ್ಷಣೆಯಲ್ಲಿ ತೊಡಗಿದ್ದಾರೆ. ಈ ಘಟನೆಯನ್ನು ಪರಿಶೀಲಿಸಿ ಮಗುವನ್ನು ಸಂಬಂಧಿಸಿದವರಿಗೆ ಹಸ್ತಾಂತರ ಮಾಡುವ ಕೆಲಸ ಮಾಡುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿನ ಸ್ಥಳೀಯ ಜನರನ್ನು ಆ ಘಟನೆ ಬಗ್ಗೆ ಮಾಹಿತಿ ಕೇಳಿದಾಗ ಬೆಳಿಗ್ಗೆ 3:00ಗಂಟೆ ಸುಮಾರಿಗೆ ಈ ಗಂಡು ಮಗವನ್ನು ಹಾಕಿ ಹೋಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಸದ್ಯ ಈ ಕಂದಮ್ಮನ ರಕ್ಷಣೆ ಆಶಾ ಕಾರ್ಯಕರ್ತರು ಹಾಗೂ ಸ್ಟಾಪ್ ನರ್ಸ ಅವರು ರಾಯಬಾಗ ತಾಲೂಕಾ ಆಸ್ಪತ್ರೆಗೆ ಆ ಮಗುವನ್ನು ಹಸ್ತಾಂತರಿಸಲಾಯಿತು. ಈ ಘಟನೆ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ


Spread the love

About inmudalgi

Check Also

ಸರಕಾರಿ ಶಾಲೆಗೆ 51ಸಾವಿರ ಸೌಂಡ ಸಿಸ್ಟಮ್ ಕಾಣಿಕೆ

Spread the loveಸರಕಾರಿ ಶಾಲೆಗೆ 51ಸಾವಿರ ಸೌಂಡ ಸಿಸ್ಟಮ್ ಕಾಣಿಕೆ ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಸರಕಾರಿ ಹಿರಿಯ ಕನ್ನಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ