ಮೂಡಲಗಿ: ಮಂಗಳವಾರ ಜುಲೈ 14 ರಿಂದ 24 ರವರೆಗೆ ಸ್ವಯಂ ಪ್ರೇರಿತವಾಗಿ ಮೂಡಲಗಿ ತಾಲೂಕಿನಾದ್ಯಂತ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ ಡಿ.ಜೆ ಮಹಾತ್ ತಿಳಿಸಿದ್ದಾರೆ.
ಸೋಮವಾರ ಸಾಂಯಕಾಲ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವರಾದ ರಮೇಶ ಜಾರಕಿಹೊಳಿ ರವಿವಾರ ಜರುಗಿದ ಸಭೆಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳನ್ನು ಸಂಪೂರ್ಣ ಲಾಕ್ ಡೌಕ್ ಮಾಡಲು ತಾಲೂಕಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಿದರಿಂದ ಸಾರ್ವಜನಿಕರು ಕೊರೋನಾ ಸೋಂಕು ನಿಯಂತ್ರಿಸಲು ಸಹಕರಿಸಬೇಕು. ಸಭೆಯ ನಿರ್ಧೇಶನ ಹಾಗೂ ಜನತೆಯ ಅಭಿಪ್ರಾಯದ ಮೇರೆಗೆ ಮೂಡಲಗಿ ತಾಲೂಕನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಿದರ ಬಗ್ಗೆ ಹೇಳಿದರು.
ಲಾಕ್ ಡೌನ್ ಸಮಯದಲ್ಲಿ ಹಾಲು, ನೀರು, ಔಷಧಿ, ಆಸ್ಪತ್ರೆಗಳಿಗೆ ವಿನಾಯಿತಿ ನೀಡಲಾಗಿದೆ. ತರಕಾರಿ ಮತ್ತು ದಿನಸಿ ವಸ್ತುಗಳನ್ನು ಹೋಮ್ ಡೆಲಿವರಿ ಮೂಲಕ ಪಡೆದುಕೊಳ್ಳಬಹುದು. ಮದ್ಯದಂಗಡಿಗಳು ಬಂದಾಗಲಿವೆ. ಮಂಗಳವಾರ ರಾತ್ರಿ 8 ಘಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಸಮಯಾವಕಾಶ ನೀಡಲಾಗಿದೆ. ಮಂಗಳವಾರ ರಾತ್ರಿ 8 ಘಂಟೆಯಿಂದ ಜು. 24 ರವರೆಗೆ ಸಂಪೂರ್ಣ ಲಾಕ್ ಡೌನ್‍ಗೆ ಸಹಕರಿಸಲು ಮನವಿಮಾಡಿಕೊಂಡರು.
ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಮಾತನಾಡಿ, ಮೂಡಲಗಿ ತಾಲೂಕಿನ ಎಲ್ಲ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರು ಬೆಂಬಲ ನೀಡಲು ಕೊರಿದರು.
ಬಿಇಒ ಎ.ಸಿ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸ್ವಯಂ ಜಾಗೃತರಾಗುವದು ಅವಶ್ಯಕವಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಹಿರಿಯ ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೋಡ, ಪಂಚಾಯತ ರಾಜ್ಯ ಇಲಾಖೆಯ ಸಹಾಯಕ ನಿರ್ಧೇಶಕ ಸಂಗಮೇಶ ರೊಡ್ಡನವರ, ಅಭಿವೃದ್ಧಿ ಅಧಿಕಾರಿ ಹನಮಂತ ತಾಳಿಕೋಟಿ, ಮರೆಪ್ಪ ಮರೆಪ್ಪಗೋಳ ಉಪಸ್ಥಿತರಿದ್ದರು.