Breaking News
Home / ಬೆಳಗಾವಿ / ನಾಳೆ ಶ್ರೀ ಅಯ್ಯಪ್ಪಸ್ವಾಮಿ 32ನೇ ಮಹಾಪೂಜೆ

ನಾಳೆ ಶ್ರೀ ಅಯ್ಯಪ್ಪಸ್ವಾಮಿ 32ನೇ ಮಹಾಪೂಜೆ

Spread the love

ನಾಳೆ ಶ್ರೀ ಅಯ್ಯಪ್ಪಸ್ವಾಮಿ 32ನೇ ಮಹಾಪೂಜೆ

ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ 32ನೇ ಶ್ರೀ ಅಯ್ಯಪ್ಪಸ್ವಾಮಿಯ ಮಹಾಪೂಜೆ ಉತ್ಸವ ಮತ್ತು ಅಗ್ನಿ ಪೂಜೆ ಹಾಗೂ ಅನ್ನ ಪ್ರಸಾದ ಕಾರ್ಯಕ್ರಮವು ಡಿ.22ರಂದು ಮದ್ಯಾಹ್ನ 2ಗಂಟೆಗೆ ಕನ್ನಿ ಸ್ವಾಮಿಗಳಿಂದ ಕುಂಭಮೇಳ ಮತ್ತು ಆನೆ ಮೇಲೆ ಅಂಬಾರಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಭಾವಚಿತ್ರ, ಮೂರ್ತಿಯ ಭವ್ಯ ಮೆರವಣಿಗೆಯು ವಿವಿಧ ವಾದ್ಯಮೇಳಗಳೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಬಸವರಂಗ ಮಂಟಪದಲ್ಲಿರುವ ಸ್ವಾಮಿಯ ಸನ್ನಿಧಾನಕ್ಕೆ ಸೇರುವದು. ಸಂಜೆ 6ಗಂಟೆಯಿಂದ ಅಗ್ನಿ ಪೂಜೆ ಮತ್ತು ಬೆಂಕಿ ಪಾದ, ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗುವದು.
ಕಾರ್ಯಕ್ರಮದ ಸಾನಿಧಯವನ್ನು ಶ್ರೀ ಶಿವಬೋಧರಂಗ ಮಠದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ, ಶ್ರೀ ಶ್ರೀಧರಬೋಧ ಸ್ವಾಮಿಜಿ, ರಂಗಾಪೂರ-ಮುನ್ಯಾಳ ಶ್ರೀ ಸದಾಶಿವಯೋಗಿಶ್ವರ ಮಠದ ಶ್ರೀ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಸುಣಧೋಳಿ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಮದ ಸ್ವಾಮಿಗಳು, ಇಟನಾಳದ ಶ್ರೀ ಮೈಲಾರಲಿಂಗೇಶ್ವರ ಮಠದ ಶ್ರೀ ಸಿದ್ದೇಶ್ವರ ಸ್ವಾಮಿಗಳು ವಹಿಸುವರು.
ಮುಖ್ಯ ಅತಿಥಿಗಳಾಗಿ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಶಿವಮೊಗ್ಗದ ಶ್ರೀ ಶಬರೀಶ ರೋಜಾ ಷಣ್ಮುಗಂ, ಬಾಗಲಕೋಟದ ಲಕ್ಷ್ಮಣ ಅಬ್ಜಲಪೂರ ಗುರುಸ್ವಾಮಿ, ಬೆಳಗಾವಿಯ ಶ್ರೀ ಮಾರುತಿ ಗುರುಸ್ವಾಮಿ, ಬೆಂಗಳೂರಿನ ರವಿ ಗುರುಸ್ವಾಮಿಗಳು ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳು ಆಗಮಿಸುವರು ಎಂದ ಸೇವಾ ಸಮಿತಿಯವರು ತಿಳಿಸಿದ್ದಾರೆ.


Spread the love

About inmudalgi

Check Also

ರಂಗಭೂಮಿ ಮತ್ತು ಜಾನಪದ ಕಲೆ ನಿತ್ಯ ನೂತನವಾಗಿದೆ : ಶಿವಪುತ್ರ ಪರಮಾನಟ್ಟಿ

Spread the love ಬೆಟಗೇರಿ:ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಾತ್ರ ರಂಗಭೂಮಿ ಮತ್ತು ಬೈಲಾಟದ ಕಲೆಗಳನ್ನು ಕಾಣಬಹುದಾಗಿದೆ. ಜಾನಪದ ನಮ್ಮ ಸಂಸ್ಕøತಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ