Breaking News
Home / ಬೆಳಗಾವಿ / ಕೃಷಿಕ ಸಮಾಜ ಹಾಗೂ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಇವರ ಸಹಯೋಗದಲ್ಲಿ ಕಿಸಾನ ಗೋಷ್ಠಿ ಕಾರ್ಯಕ್ರಮ

ಕೃಷಿಕ ಸಮಾಜ ಹಾಗೂ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಇವರ ಸಹಯೋಗದಲ್ಲಿ ಕಿಸಾನ ಗೋಷ್ಠಿ ಕಾರ್ಯಕ್ರಮ

Spread the love

ಮೂಡಲಗಿ :ರೈತ ದಿನಾಚರಣೆಯ ಅಂಗವಾಗಿ ಗೋಕಾಕ ಕೃಷಿ ಇಲಾಖೆಯ ವತಿಯಿಂದ ಆತ್ಮ (ATMA) ಯೋಜನೆ, ಗೋಕಾಕ್/ಮೂಡಲಗಿ ತಾಲೂಕು ಕೃಷಿಕ ಸಮಾಜ ಹಾಗೂ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಇವರ ಸಹಯೋಗದಲ್ಲಿ ಕಿಸಾನ ಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಎಂ.ಎನ್. ಮಳವಡಿ ಅವರು ಬೇಸಾಯ ಪದ್ಧತಿ ಮತ್ತು ಸಮಗ್ರ ಕೃಷಿ ಕ್ರಮಗಳ ಬಗ್ಗೆ, ಡಾ. ಪರಶುರಾಮ್ ಪಾಟೀಲ್ ಅವರು ಸಮಗ್ರ ಬೆಳೆ ಪದ್ಧತಿ ಹಾಗೂ ಮೌಲ್ಯವರ್ಧನೆ ಕುರಿತು, ಮತ್ತು ಡಾ. ಸೂರಜ್ ಕೌಜಲಗಿ ಅವರು ಪಶು ಸಂಗೋಪನೆ ಕುರಿತು ಉಪನ್ಯಾಸ ನೀಡಿದರು.

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಹಾಗೂ ತೋಟಗಾರಿಕೆ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ಶ್ರೀ ಬಾಳಪ್ಪ ಬೆಳಕುಡ್ ಅವರನ್ನು ಕೃಷಿ ಇಲಾಖೆ ಪರವಾಗಿ ಗೌರವಿಸಲಾಯಿತು. ರೈತ ಸಂಘದ ರಾಜ್ಯಾಧ್ಯಕ್ಷ ಶ್ರೀ ಚೂನಪ್ಪ ಪೂಜೇರಿ ಅವರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರು, ಕೃಷಿ ಸಖಿಗಳು, ಕೃಷಿ ಇಲಾಖೆ, ಕೃಷಿ ಸಂಜೀವಿನಿ ಮತ್ತು ಆತ್ಮ ಯೋಜನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

*ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಿಸಲು ಪ್ರತಿಯೊಂದು ಮಗುವಿಗೆ ಪೋಲಿಯೋ ಲಸಿಕೆ ಅವಶ್ಯ : ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ*

Spread the love *ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಿಸಲು ಪ್ರತಿಯೊಂದು ಮಗುವಿಗೆ ಪೋಲಿಯೋ ಲಸಿಕೆ ಅವಶ್ಯ : ಜಿಲ್ಲಾಧ್ಯಕ್ಷ ಸಿದ್ದಣ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ