
ಮೂಡಲಗಿ : ಕರ್ನಾಟಕ ರಾಜ್ಯದ 31 ಜಿಲ್ಲೆಯ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಸಸ್ತಿ ಪ್ರಧಾನ ಕಾರ್ಯಕ್ರಮ ಯುವ ಜನತೆಗೆ ಸ್ಪೂರ್ತಿದಾಯಕವಾಗಿದೆ. ಜಾನಪದ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ಪಾಠ ಅಡಗಿದೆ ಎಂದು ಹುಲಜಂತಿ ಪಟ್ಟದ ಪೂಜ್ಯರಾದ ಮಾಳಿಂಗರಾಯ ಮಹಾರಾಜರು ಅಭಿಪ್ರಾಯ ಪಟ್ಟರು.
ಅವರು ಇತ್ತೀಚೆಗೆ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರ .ಜಿಲ್ಲಾ ಘಟಕ ಬೆಳಗಾವಿ ಹಾಗೂ ಶ್ರೀ ಮಾಲಕ್ಷ್ಮಿ ದೇವಿ ಡೊಳ್ಳು ಕುಣಿತ ಕಲಾ ಸಂಘ, ಶ್ರೀ ಇಟ್ಟಪ್ಪ ದೇವರ ಅಭಿವೃದ್ಧಿ ಸೇವಾ ಸಮಿತಿ ಹಳ್ಳೂರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ “ಜಾನಪದ ಯುವ ಜಾತ್ರೆ” ಹಾಗೂ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿ ಅವರು ನಮ್ಮ ಉತ್ಸಾಹಿ ಯುವ ಮುಖಂಡ ಸಿದ್ದಣ್ಣ ದುರದುಂಡಿ ಅವರ ನಿರಂತರ ಯುವ ಸಂಘಟನೆ ಮತ್ತು ನಿಶ್ವಾರ್ಥ ಸೇವೆ ನಿಜವಾಗಲು ಶ್ಲಾಘನಿಯವಾಗಿದೆ. ಹಳ್ಳಿಗಾಡಿನ ಬದುಕು ಜಾನಪದ ಸಾಹಿತ್ಯದ ಮೂಲ. ಜಾನಪದ ಸಾಹಿತ್ಯದಲ್ಲಿ ಮೂಲ ಶಿಕ್ಷಣದ ಪಾಠ ಇವೆ. ಮನುಷ್ಯನ ಅರಿವನ್ನು ವಿಸ್ತರಿಸಲು ಈ ಸಾಹಿತ್ಯ ಪೂರಕವಾಗಿದೆ. ನಮ್ಮ ಪೂರ್ವಜರು ಜಾನಪದ ಸಾಹಿತ್ಯದ ಮೂಲಕ ಮೌಲ್ಯಗಳನ್ನು ಈ ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿದ್ದಾರೆ’ ಎಂದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ರಾಜ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿ ಮಾತನಾಡಿ ಕೋಣೆ ಶಿಶು ಕೊಳಿತು, ಓಣಿ ಶಿಶು ಬೆಳಿತು ಎಂಬ ಗಾದೆ ಮಾತುಗಳು ಮಕ್ಕಳ ಬೆಳವಣಿಗೆಯನ್ನು ಹೇಳಿದೆ. ಜಾನಪದ ಸಾಹಿತ್ಯ ಜೀವನದ ಮೌಲ್ಯಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಜಾನಪದ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು. ಜಾನಪದ ಗೀತೆ, ಗಾದೆ, ಒಗುಟುಗಳನ್ನು ಸಂಗ್ರಹಿಸುವ ಕಾರ್ಯವಾಗಬೇಕು ಎಂದರು.

ನಿವೃತ್ತ ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳಾದ ಎಸ್ ಯು ಜಮಾದಾರ್ ಮಾತನಾಡಿ ಹಳ್ಳಿಗಾಡಿನಲ್ಲಿ ಜಾನಪದ ಸಾಹಿತ್ಯ ಉಳಿದಿದೆ. ವಿದ್ಯಾರ್ಥಿಗಳ ವ್ಯಕ್ತಿತ್ಚ ವಿಕಸನಕ್ಕೆ ಜಾನಪದ ಸಾಹಿತ್ಯದಲ್ಲಿರುವ ಮೌಲ್ಯಗಳು ಸಹಕಾರಿಯಾಗಿವೆ. ಜೀವನದಲ್ಲಿ ಸಾಧನೆ ಮಾಡಿದ ಮಹನೀಯರು ಪ್ರೇರಣೆಯಾಗಬೇಕು’ ಎಂದು ಹೇಳಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರು ಹಾಗೂ ಕಾರ್ಯಕ್ರಮದ ರೂವಾರಿಗಳಾದ ಸಿದ್ದಣ್ಣ ದುರದುಂಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಇಂದಿಗೂ ನಮ್ಮ ಹಿರಿಯರು ಕಲಾವಿದರು ವಿವಿಧ ಹಾಡುಗಳನ್ನು, ಒಗಟುಗಳು, ಲಾವಣಿ ಪದಗಳು, ಹಂತಿ ಪದಗಳು, ಗೀಗೀ ಪದಗಳು, ಬಜನಾ ಪದಗಳು, ಡೊಳ್ಳಿನ ಪದಗಳು, ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ನಮ್ಮ ಭಾಗದ ಶಾಸಕರಾದ ಬಾಲಚಂದ್ರ ಅಣ್ಣಾ ಜಾರಕಿಹೊಳಿ ಸಹಕಾರದಿಂದ ಎಲ್ಲಾ ಕಾರ್ಯಕ್ರಮಗಳು ಸುಂದರವಾಗಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೋಕಾಕ ಪ್ರಭಾ ಶುಗರ್ಸ್ ಅಧ್ಯಕ್ಷರಾದ ಸಿದ್ದಲಿಂಗಪ್ಪ ಕಂಬಳಿ, ಲಕ್ಷ್ಮಣ ಮಸಗುಪ್ಪಿ, ಸಿದ್ದು ಕಂಕನವಾಡಿ, ಕೆಂಚಪ್ಪ ಮಹಾರಾಜರು ಸುರೇಶ ಕತ್ತಿ, ಮಂಜುನಾಥ ಗೊಂಡಬಾಳ, ಕೊಟ್ರೇಶ್ ದಾವಣಗೆರೆ, ಸಿದ್ದಪ್ಪ ಹೊಸಮನಿ, ಸದಾಶಿವ ದುರದುಂಡಿ, ಲಕ್ಷ್ಮಣ ಸಾಬಣ್ಣವರ, ಮಹಾದೇವ ದೂರದಂಡಿ, ಈಶ್ವರ್ ಕಂಕನವಾಡಿ, ಲಕ್ಕಪ್ಪ ದುರದುಂಡಿ, ಸತೀಶ್ ಹೊಸಪೇಟೆ, ರಮೇಶ್ ದುರದುಂಡಿ, ಮಾಧೇಶ ಪತ್ತಾರ್, ಜಗದೀಶ್ ಡೊಳ್ಳಿ, ಮಹಾಂತೇಶ ದುರದುಂಡಿ ರಾಕೇಶ ಪೂಜೇರಿ ಹಾಗೂ ಗುರು ಹಿರಿಯರು, ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯ ಯುವ ಪ್ರಶಸ್ತಿ ವಿಜೇತ ರಾಘವೇಂದ್ರ ಲಂಬುಗೋಳ ಸ್ವಾಗತಿಸಿದರು. ಜಿಲ್ಲಾ ಯುವ ಪ್ರಶಸ್ತಿ ವಿಜೇರಾದ ಮಾಯಕ್ಕ ದುರದುಂಡಿ ನಿರೂಪಿಸಿದರು. ರಾಹುಲ್ ಕಾಂಬಳೆ ವಂದಿಸಿದರು.
IN MUDALGI Latest Kannada News