Breaking News
Home / ಬೆಳಗಾವಿ / ಬೆಳಗಾವಿಯ ಬಸವರಾಜ ಜಕ್ಕನವರ ಗೆ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರಧಾನ

ಬೆಳಗಾವಿಯ ಬಸವರಾಜ ಜಕ್ಕನವರ ಗೆ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರಧಾನ

Spread the love

*ಬೆಳಗಾವಿಯ ಬಸವರಾಜ ಜಕ್ಕನವರ ಗೆ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರಧಾನ*

ಬೆಳಗಾವಿ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ಜಿಲ್ಲಾ ಘಟಕ ವಿಜಯಪುರ ಇವರು ಕೊಡಮಾಡುವ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿಯನ್ನು ಬೆಳಗಾವಿಯ ಬಸವರಾಜ ಜಕ್ಕಣ್ಣವರ್ ಅವರಿಗೆ ನೀಡಿ ಗೌರವಿಸಲಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ಇತ್ತೀಚೆಗೆ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ನಡೆದ ರಾಷ್ಟ್ರೀಯ ಯುವ ವೈಭವ ಹಾಗೂ ವಿವೇಕ ಯುವ ಚೈತನ್ಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಬಸವರಾಜ ಜಕ್ಕನ್ನವರ ಅವರಿಗೆ ಪ್ರಶಸ್ತಿಯನ್ನು ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ವೀಣಾ ಕಾಶಪ್ಪನವರ, ಸಮಾಜ ಸೇವೆಕಿ ಪಲ್ಲವಿ ನಾಡಗೌಡ್ರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಬಾಲಾಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ವಿಜಯಪುರ ಜಿಲ್ಲಾಧ್ಯಕ್ಷ ಪುಂಡಲೀಕ್ ಮುರಾಳ, ಬೆಳಗಾವಿ ಜಿಲ್ಲಾಧ್ಯಾಕ್ಷ ಸಿದ್ದಣ್ಣ ದುರದುಂಡಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ಕಳೆದ 26 ವರ್ಷಗಳಿಂದ ಗ್ರಾಮೀಣ ಕ್ರೀಡೆ, ಕಬ್ಬಡ್ಡಿ, ವಾಲಿಬಾಲ್, ಥ್ರೋಬಾಲ್ ಹಲವಾರು ಕ್ರೀಡೆಗಳನ್ನು ಏರ್ಪಡಿಸಿ, ಕಲೆ, ಸಾಹಿತ್ಯ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯುವಜನಮೇಳ ಯುವಜನೋತ್ಸವ ನಿರಂತರ ಯುವ ಸಂಘಟನೆ, ಸಮಾಜ ಸೇವಾ ಕಾರ್ಯವನ್ನು ಪರಿಗಣಿಸಿ 26 ನೇ ಸಾಲಿನ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಜ್ಯದ 31 ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಗೌರವಿಸಲಾಗಿದ್ದು ಬೆಳಗಾವಿಯ ಬಸವರಾಜ ಜಕ್ಕನ್ನವರ ಪ್ರಶಸ್ತಿ ಪಡೆದುಕೊಂಡ ಅವರಿಗೆ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದಣ್ಣ ದುರದುಂಡಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಹಲವಾರು ಸಂಘ ಸಂಸ್ಥೆಗಳು ಅಭಿನಂದಿಸಿವೆ.


Spread the love

About inmudalgi

Check Also

ಶಿಕ್ಷಕ ಶಿವರಾಜ ಕಾಂಬಳೆ ಅವರಿಗೆ ಜ್ಞಾನಭಾರತಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ

Spread the loveಮೂಡಲಗಿ: ತಾಲ್ಲೂಕಿನ ಧರ್ಮಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕ ಶಿವರಾಜ ಕಾಂಬಳೆ ಅವರ ಶೈಕ್ಷಣಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ