Breaking News
Home / ಬೆಳಗಾವಿ / *ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಅವರಿಗೆ ಯುವರತ್ನ ಪ್ರಶಸ್ತಿ ಪ್ರಧಾನ*

*ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಅವರಿಗೆ ಯುವರತ್ನ ಪ್ರಶಸ್ತಿ ಪ್ರಧಾನ*

Spread the love

ಮೂಡಲಗಿ : ಹಳ್ಳೂರ ಗ್ರಾಮದ ಯುವ ಮುಖಂಡರು, ಸಾಲು ಮರದ ಸಿದ್ದಣ್ಣ ಖ್ಯಾತಿಯ ಪರಿಸರ ಪ್ರೇಮಿ, ಸಂಘಟನೆಯ ಸರದಾರ ಬಿರುದು ಪಡೆದ ಉದಯೋನ್ಮುಖ ಪ್ರತಿಭೆ ಸಿದ್ದಣ್ಣ ದುರದುಂಡಿ ಅವರಿಗೆ ಶ್ರೀಮತಿ ಮಾಯವ್ವಾ ವಿಠ್ಠಲ ಕಪರಟ್ಟಿ ಯುವರತ್ನ ಪ್ರಶಸ್ತಿ ಪ್ರಧಾನ ನಡೆಯಿತು.

ಕೆಸರಗೋಪ್ಪ ಗ್ರಾಮದ ಶ್ರೀಮತಿ ಮಾಯವ್ವ ವಿಠ್ಠಲ ಕಪರಟ್ಟಿ ಆಂಗ್ಲ ಮಾಧ್ಯಮ ಶಾಲೆಯ 9ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಕಪರಟ್ಟಿ ಫೆಸ್ಟಿವಲ್ 2026 ರ ಕಾರ್ಯಕ್ರಮದಲ್ಲಿ ಯುವ ಸಂಘಟಕ ಸಿದ್ದಣ್ಣ ದುರದುಂಡಿ ಅವರಿಗೆ ಶ್ರೀಮತಿ ಮಾಯವ್ವ ಕಪರಟ್ಟಿ ಯುವರತ್ನ ಪ್ರಶಸ್ತಿಯನ್ನು ಹಂದಿಗುಂದದ ಪೂಜ್ಯಶ್ರೀ ಶ್ರೀಮಂತಸಿದ್ಧ ಶಿವಯೋಗಿಗಳು, ಸಂಸ್ಥೆಯ ಅಧ್ಯಕ್ಷರಾದ ಜ್ಯೋತೆಪ್ಪ ಕಪರಟ್ಟಿ, ಬಾಗಲಕೋಟ್ ವಿಜಯಪುರದ ಕೆಎಂಎಫ್ ಮಾಜಿ ಅಧ್ಯಕ್ಷರಾದ ರಂಗನಗೌಡ ಪಾಟೀಲ ಅವರು ಸಿದ್ದಣ್ಣ ದುರದುಂಡಿ ಅವರಿಗೆ ಯುವರತ್ನ ಪ್ರಶಸ್ತಿ ಪ್ರಧಾನ ಮಾಡಿದರು.

ತೇರದಾಳ ಮತಕ್ಷೇತ್ರದ ಮುಖಂಡರಾದ ಸಿದ್ದು ಕೋನ್ನೂರ, ಮಹಾಲಿಂಗಪುರ್ ವಲಯದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಸವರಾಜ ಮೇಟಿ ಡಾ. ಪದ್ಮಜಿತ್ ನಾಡಗೌಡ್ರ, ಮಹಾದೇವ ಕಪರಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಸಮಾಜ ಸೇವಕ ಸಿದ್ದಣ್ಣ ದುರದುಂಡಿ ಅವರು ಹಲವಾರು ವರ್ಷಗಳಿಂದ ಕ್ರೀಡೆ, ಜನಪದ ಕಲೆ, ಸಾಹಿತ್ಯ, ಧಾರ್ಮಿಕ, ಅಷ್ಟೆ ಅಲ್ಲದೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಾದ್ಯಂತ ಪರಿಸರ ಜಾಗೃತಿ, ಸಾಂಸ್ಕೃತಿಕ, ಯುವ ಸಂಘಟನೆ ವಿವಿಧ ಕ್ಷೇತ್ರದಲ್ಲಿ ನಿರಂತರವಾಗಿ ಜಿಲ್ಲೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಡಿದ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಶ್ರೀಮತಿ ಮಾಯವ್ವ ಕಪರಟ್ಟಿ 2026 ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಸಿದ್ದಣ್ಣ ದುರದುಂಡಿ ಅವರಿಗೆ “ಯುವರತ್ನ ಪ್ರಶಸ್ತಿ ಪ್ರಧಾನ” ಮಾಡಿ ಗೌರವಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಜೋತೆಪ್ಪ ಕಪರಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ


Spread the love

About inmudalgi

Check Also

ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ

Spread the love ಗೋಮಾತೆಯ ಗೌರವದ ಅಭಿಯಾನದ ಆಹ್ವಾನಕ್ಕೆ ಚಾಲನೆ ಮೂಡಲಗಿ: ಬರುವ ಏಪ್ರಿಲ್ ೨೭ ರಂದು ದೇಶಾದ್ಯಂತ ಹಮ್ಮಿಕೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ