Breaking News
Home / ತಾಲ್ಲೂಕು / ಅನಗತ್ಯವಾಗಿ ಓಡಾಡಿದರೆ ಮುಂದಿನ‌ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಖಡಕ ವಾರ್ನಿಂಗ್ : ಮಲ್ಲಿಕಾರ್ಜುನ ಸಿಂಧೂರ

ಅನಗತ್ಯವಾಗಿ ಓಡಾಡಿದರೆ ಮುಂದಿನ‌ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಖಡಕ ವಾರ್ನಿಂಗ್ : ಮಲ್ಲಿಕಾರ್ಜುನ ಸಿಂಧೂರ

Spread the love

ಮೂಡಲಗಿ : ಮೂಡಲಗಿ ತಾಲ್ಲೂಕಿನಲ್ಲಿ ಯಾರಿಗೂ ಸೋಂಕು ತಗಲಬಾರದು, ನೀವುಗಳು ತೊಂದರೆಗೆ ಒಳಗಾಗಬಾರದೆಂದು ಎಂದು ಆರೋಗ್ಯ ಇಲಾಖೆ ಪುರಸಭೆ ಸಿಬ್ಬಂದಿ ತಾಲ್ಲೂಕ ಆಡಳಿತ ನಮ್ಮ ಪೋಲಿಸ ಇಲಾಖೆ ನಿರಂತರ ಕೆಲಸ ಮಾಡುತ್ತಿದೆ. ಜೀವನಾವಶ್ಯಕ ವಸ್ತುಗಳು ತರಲು ನಿತ್ಯವೂ ಹೊರಗಡೆ ಬರಬೇಕೆಂದಿಲ್ಲ. ಮಾಹಾಮಾರಿ ಕೊರೋನ ಹರಡಿದ ಮೇಲೆ ಜೀವವೇ ಇರುವುದಿಲ್ಲ. ಒಂದು ಮನೆಯಲ್ಲಿ ಒಬ್ಬರಿಗೆ ಬಂದರೆ ಇಡೀ ಮನೆಯವರಿಗೆ ಈ ವೈರಸ ಹರಡುತ್ತದೆ. ಜೀವವೇ ಇಲ್ಲದ ಮೇಲೆ ಜೀವನ ಹೇಗೆ ನಡೆಸ್ತೀರಿ ಎಂದು ಕೊರೋನ ವೈರಸನ ಭಯಾನಕತೆಯನ್ನು ಜನರಿಗೆ ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ ತಿಳಿಸಿದರು.

ಕೋವಿಡ-19 ಹರಡದಂತೆ ಸಾರ್ವಜನಿಕರು ಸಹಕರಿಸಬೇಕು ಈ ಮಾರಕ ಸೋಂಕು ಪಟ್ಟಣದಲ್ಲಿ ಹರಡದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಪೋಲಿಸ ಇಲಾಖೆಗೆ ಸಾರ್ವಜನಿಕರು ಸಹರಿಸಬೇಕು ಇದುವರೆಗೂ ಜನರು ಮಾರಕ ಸೊಂಕಿನ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇರುವುದೇ ರಾಜ್ಯದಲ್ಲಿ ದಿನೇ-ದಿನೇ ಪ್ರಕರಣಗಳು ಹೆಚ್ಚಾಗುತ್ತಿವೆ.

ಮೂಡಲಗಿ ತಾಲೂಕಿನಲ್ಲಿ ಪ್ರಕರಣಗಳು ಇಲ್ಲವೆಂದುಕೊಂಡು ಇದ್ದೆವು ಆದರೆ ಯಾದವಾಡ, ಕೌಜಲಗಿ, ಸಮೀಪದ ಹಳ್ಳಿಗಳಾದ ದುರದುಂಡಿ ಗ್ರಾಮದಲ್ಲಿ ಕೊರೋನಾ ಬಂದಿದೆ. ತಾವುಗಳು ಅನವಶ್ಯಕವಾಗಿ ಓಡಾಡುವುದು ಬೇಡ. ಪೋಲಿಸರಿಗೆ ಯಾರ ಮೇಲೂ ದ್ವೇಷವಿಲ್ಲ. ಕಾನೂನಿಗೆ ಗೌರವಿಸುವ ಮೂಲಕ ಜನರು ಸರ್ಕಾರದ ಆದೇಶ ಪಾಲಿಸಬೇಕು. ಅನಾವಶ್ಯಕವಾಗಿ ಯುವಕರು ರಸ್ತೆಗಳಲ್ಲಿ ಓಡಾಡುವುದನ್ನು ನಿಲ್ಲಿಸಬೇಕು.

ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಮನೆಗಳಲ್ಲಿಯೇ ಇರಬೇಕು. ಯುವಕರ ಜೀವನ ಹಾಳಾಗಬಾರದು ಎಂದು ಇದುವರೆಗೂ ನಾವು ಯಾವುದೇ ಪ್ರಕರಣಗಳನ್ನು ದಾಖಲಿಸಿಲ್ಲ. ವಿನಾಕಾರಣ ಓಡಾಡುವವರನ್ನು ಕಂಡರೆ ಇನ್ನು ಮುಂದೆ ಯಾವುದೇ ಮುಲಾಜಿಲ್ಲದೇ ಅಂಥವರ ವಿರುದ್ಧ ಕೇಸ್ ದಾಖಲು ಮಾಡಲಾಗುವುದೆಂದು ಖಡಕಕ್ಕಾಗಿ ಎಚ್ಚರಿಕೆ ನೀಡಿದ್ದಾರೆ

ಮೂಡಲಗಿ ಪಟ್ಟಣದ ಕೇಲವು ಕಡೆಗಳಲ್ಲಿ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕೆಲವಡಿ ಯುವಕರು ಗುಂಪಾಗಿ ಕೂಡುವುದು, ಕ್ರಿಕೆಟ್ ಆಡುವುದು ಹರಟೆ ಹೊಡೆಯುವುದು, ರಸ್ತೆಗಳಲ್ಲಿ ಗುಂಪು ಗುಂಪಾಗಿ ತಿರುಗಾಡುವುದು ಗಮನಕ್ಕೆ ಬಂದಿರುತ್ತದೆ, ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ನಿಮ್ಮ ಜೀವನದ ಒಳಿತಿಗಾಗಿ ಸರ್ಕಾರ ಇಲಾಖೆ ಶ್ರಮಿಸುತ್ತಿದೆ. ದಯವಿಟ್ಟು ಯಾರೂ ಹೊರಗಡೆ ಬಾರದಂತೆ ಮನೆಗಳಲ್ಲೇ ಇದ್ದು ಕರೋನ ವೈರಸ ಹರಡದಂತೆ ನೋಡಿಕೋಳಿ ನಿಮ್ಮ ಮತ್ತು ನಿಮ್ಮವರ ಜೀವನ ಉಳಿಸಿಕೊಳ್ಳಿ ಎಂದು ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ಮನವಿ ಮಾಡಿದರು.

ಮೂಡಲಗಿ ಪುರಸಭೆ ವ್ಯಾಪ್ತಿಯ ನಾನಾ ಏರಿಯಾಗಳಲ್ಲಿ ಜನಜಾಗೃತಿ ಮೂಡಿಸಿದ ಪೋಲಿಸ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ ಜನರಲ್ಲಿ ಜಾಗೃತಿ ಮೂಡಿಸುವದರ ಜೋತೆ ಸರ್ಕಾರದ ಆದೇಶ ಪಾಲಿಸದವರಿಗೆ ಮುಂದೆ ಮಾರಿ ಹಬ್ಬದ ಸೂಚನೆ ನೀಡಿದಂತು ಸುಳ್ಳಲ್ಲ ಎಂದು ಹೇಳಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ