Breaking News
Home / ತಾಲ್ಲೂಕು / “ಅನಂತಾದ್ರೀಶ ಗೋಕಾವಿ ನಾಡಿನ ಶಿವಪಾರಿಜಾತದ ಹರಿಕಾರ……ಡಾ.ಸುರೇಶ ಹನಗಂಡಿ”

“ಅನಂತಾದ್ರೀಶ ಗೋಕಾವಿ ನಾಡಿನ ಶಿವಪಾರಿಜಾತದ ಹರಿಕಾರ……ಡಾ.ಸುರೇಶ ಹನಗಂಡಿ”

Spread the love

“ಅನಂತಾದ್ರೀಶ ಗೋಕಾವಿ ನಾಡಿನ ಶಿವಪಾರಿಜಾತದ ಹರಿಕಾರ……ಡಾ.ಸುರೇಶ ಹನಗಂಡಿ”

ಹರಿದಾಸ ಪರಂಪರೆಯಲ್ಲಿ ಗೋಕಾವಿ ಯ ಅನಂತಾದ್ರೀಶ ಹರಿ-ಹರ ಸಾಮರಸ್ಯ ಬಾವ ಬೆಸುಗೆ ನೀಡಿದ ದಾಸನಾಗಿದ್ದಾನೆ ಮತ್ತು ಶಿವಪಾರಿಜಾತದ ಹರಿಕಾರನಾಗಿದ್ದಾನೆ ಎಂದು ಸಾಹಿತಿ ಸಂಶೋಧಕ ಡಾ. ಸುರೇಶ ಹನಗಂಡಿ ಹೇಳಿದರು.
ಅವರು ಕೋವಿಡ್-2019 ಲಾಕ್ ಡೌನ್ ನಿಮಿತ್ತ         ಶನಿವಾರ ಸಾಯಂಕಾಲ ೪ ಗಂಟೆಗೆ  ಗೂಗಲ್ ಮೀಟನ ಸೇಮಿನಾರ  ವಿಶೇಷ ಉಪನ್ಯಾಸ ಎರಡನೇ ಗೋಷ್ಠಿಯಲ್ಲಿ ಮಾತನಾಡಿದರು ಗೋಕಾವಿ ನಾಡಿನ ಸಾಹಿತ್ಯ ಪರಂಪರೆಯಲ್ಲಿ ದಾಸ ಸಾಹಿತ್ಯ ನೀಡಿದ ಏಕೈಕ ಹರಿದಾಸನೆನಿಸಿದ್ದಾರೆ. ಕನ್ನಡ, ಮರಾಠಿ, ಬೆಂಗಾಲಿ ಭಾಷೆಯಲ್ಲಿ ಹಿಡಿತ ಸಾಧಿಸಿದ ಈವರು ಪ್ರಲ್ಹಾದ ಚರಿತೆ, ತುಳಸಿ ಮಹಾತ್ಮೆಯನ್ನು ಬರೆದನು ಎಂದು ಹೇಳಿದರು.

ಸಾವಳಗಿಯ ಶ್ರೀ ಶಿವಲಿಂಗೇಶ್ವರ ಭಾವೈಕ್ಯತೆಯ ಮಠ ವಿಷಯ ಕುರಿತು ಶಿಕ್ಷಕ, ಕವಿ ಈಶ್ವರ ಮಮದಾಪೂರ ಮಾತನಾಡಿದರು. ಕಲಾವಿದ,ಸಾಹಿತಿ ಪ್ರಾ.ಜಯಾನಂದ ಮಾದರ ಸಂಘಟನೆ ಸಂಚಾಲಕತ್ವವಹಿಸಿದ್ದರು.ಹಿರಿಯ ಸಾಹಿತಿ ಪ್ರಕಾಶ್ ಕೋಟಿನತೋಟ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಸಿ.ಕೆ.ನಾವಲಗಿ, ಸಿದ್ಧಾರ್ಥ ವಾಡೆನ್ನವರ, ರಮೇಶ ಮಿರ್ಜಿ, ವಿದ್ಯಾ ರೆಡ್ಡಿ, ಲಕ್ಷ್ಮಣ್ ಚೌರಿ, ಭಾರತಿ ಮದಭಾವಿ,ಮಹಾನಂದ ಪಾಟೀಲ ಶಂಕರ ನಿಂಗನೂರ, ಆನಂದ ಸೋರಗಾವಿ, ಅರುಣ್ ಸವತಿಕಾಯಿ ಇನ್ನೂ ಅನೇಕರು ಉಪಸ್ತಿತರಿದ್ದರು .ಪ್ರೊ .ಯರಿಯಪ್ಪ ಬೆಳಗುರ್ಕಿ ವಂದಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ