Breaking News
Home / Recent Posts / ಗಣೇಶೋತ್ಸವದಲ್ಲಿ ಕೋವಿಡ್ ನಿಯಮ ಮೀರಿದರೆ ಶಿಸ್ತುಕ್ರಮ: ಕಲ್ಮೇಶ ಬಾಗಲಿ

ಗಣೇಶೋತ್ಸವದಲ್ಲಿ ಕೋವಿಡ್ ನಿಯಮ ಮೀರಿದರೆ ಶಿಸ್ತುಕ್ರಮ: ಕಲ್ಮೇಶ ಬಾಗಲಿ

Spread the love

ಗಣೇಶೋತ್ಸವದಲ್ಲಿ ಕೋವಿಡ್ ನಿಯಮ ಮೀರಿದರೆ ಶಿಸ್ತುಕ್ರಮ: ಕಲ್ಮೇಶ ಬಾಗಲಿ

ಬೆಟಗೇರಿ:ಗ್ರಾಮದ ಗ್ರಾಮ ಪಂಚಾಯತಿ, ಹೆಸ್ಕಾಂ ಹಾಗೂ ಪೊಲೀಸ್ ಇಲಾಖೆಗಳ ಅನುಮತಿ ಇಲ್ಲದೆ ಗ್ರಾಮದಲ್ಲಿ ಸಾರ್ವಜನಿಕ ಗಣಪತಿ ಸ್ಥಾಪಿಸಲು ಅನುಮತಿ ಇರುವುದಿಲ್ಲಾ, ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಸ್ಥಳೀಯ ಬೀಟ್ ಪೊಲೀಸ್ ಪೇದೆ ಕಲ್ಮೇಶ ಬಾಗಲಿ ಹೇಳಿದರು.
ಬೆಟಗೇರಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಪಿಎಸ್‍ಐ ಹನಮಂತ ನರಳೆ ಅವರ ಮಾರ್ಗದರ್ಶನದಂತೆ ಬುಧವಾರ ಸೆ.8ರಂದು ನಡೆದ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.
ಗಣೇಶ ಮೂರ್ತಿ ಸ್ಥಾಪಿಸಿದ ಸ್ಥಳದಲ್ಲಿ ಜೂಜಾಟ ಆಡುವುದು ಕಂಡು ಬಂದಲ್ಲಿ ಗಣೇಶ ಮಂಡಳಿಯ ಪರವಾಣಿಗೆ ರದ್ದುಪಡಿಸಿ, ಅವರ ಮೇಲೆ ನಿರ್ದಾಕ್ಷೀಣ್ಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಡಾಲ್ಬಿ, ಮೆರವಣಿಗೆ, ರಸಮಂಜರಿ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ಆಯೋಜಿಸುವಂತಿಲ್ಲ ಎಂದು ಪೊಲೀಸ್ ಪೇದೆ ಕಲ್ಮೇಶ ಬಾಗಲಿ ತಿಳಿಸಿದರು.
ಗ್ರಾಮ ಪಂಚಾಯತಿ ಪಿಡಿಒ ಎಚ್.ಎನ್.ಭಾವಿಕಟ್ಟಿ ಮಾತನಾಡಿ, ಕೋವಿಡ್ ನಿಯಮಗಳನ್ನು ತಪ್ಪದೇ ಎಲ್ಲರೂ ಪಾಲಿಸಿ, ಸ್ಥಳೀಯ ಗಣೇಶ ಮಂಡಳಿಯವರು ಶಾಂತಿ ಸೌಹಾರ್ದತೆಯಿಂದ ಗಣೇಶೋತ್ಸವವನ್ನು ಆಚರಿಸಬೇಕು ಎಂದರು.
ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸಿದ್ಧಾರೂಢ ಬಡಬಡೆ, ಸುರೇಶ ಬಾಣಸಿ, ವಿಠಲ ಚಂದರಗಿ, ಈರಣ್ನ ಸಿದ್ನಾಳ, ಬೀರಪ್ಪ ಕುರಬೇಟ, ಸಿದ್ರಾಮ ಚಂದರಗಿ, ಈರಣ್ಣ ಬಳಿಗಾರ, ಪ್ರಕಾಶ ಹಾಲಣ್ಣವರ, ರಮೇಶ ಕಂಬಿ ಮಾರುತಿ ಬಣಜಿಗೇರ, ಹನುಮಂತ ಕೋಣಿ, ರಾಘು ಬೆಟಗೇರಿ, ಸ್ಥಳೀಯ ಗಣೇಶ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

19ನೇ ಶಿವಾನುಭವ ಗೋಷ್ಠಿ, ‘ಶುದ್ಧ ಕಾಯಕದಿಂದ ಜೀವನದಲ್ಲಿ ಸಂತೃಪ್ತಿ’

Spread the loveಮೂಡಲಗಿ: ‘ಪ್ರಾಮಾಣಿಕತೆ ಮತ್ತು ಶುದ್ಧ ಕಾಯಕದಿಂದ ಜೀವನದಲ್ಲಿ ಆನಂದ ಮತ್ತು ಸಂತೃಪ್ತಿ ದೊರೆಯುತ್ತದೆ” ಎಂದು ಅರಭಾವಿ ಮಠದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ