ಬೆಳಗಾವಿ- ಕೊರೋನಾ ಚೆಲ್ಲಾಟ ಬೆಳಗಾವಿ ಜಿಲ್ಲೆಯ ಬುಡಮೇಲು ಮಾಡಿದೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ದಿನವೂ ಮಹಾಮಾರಿ ವೈರಸ್ ದಾಳಿ ಮಾಡುತ್ತಲೇ ಇದ್ದು ಇಂದು ಭಾನುವಾರ ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಜಿಲ್ಲೆಯ 87 ಜನರಿಗೆ ಸೊಂಕು ದೃಡವಾಗಿದೆ.
ಇಂದು ಸಂಡೇ ಲಾಕ್ ಡೌನ್ ನಡುವೆಯೂ ಬೆಳಗಾವಿ ಜಿಲ್ಲೆಯಲ್ಲಿ 87 ಸೊಂಕಿತರು ಪತ್ತೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಸಾವಿರ ಗಡಿ ದಾಟಿ 1013 ಕ್ಕೇ ಏರಿಕೆಯಾಗಿದೆ .
ಬೆಳಗಾವಿ ನಗರ ಶಾಸಕರಿಗೆ ಕೊರೋನಾ ಕಾಣಿಸಿತ್ತು. ಈಗ ಶಾಸಕರ ಪತ್ನಿ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದೆ.
ಗೋಕಾಕ್ ನಲ್ಲಿ ಒಂದೇ ದಿನ 8 ಗರ್ಭಿಣಿಯರಲ್ಲಿ ಸೋಂಕು ದೃಢಪಟ್ಟಿದ್ದು, ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಗೋಕಾಕ ಮಹಿಳಾ-ಮಕ್ಕಳ ಆಸ್ಪತ್ರೆಯಲ್ಲಿ ಒಂದೇ ದಿನ 8 ಗರ್ಭಿಣಿಯಲ್ಲಿ ಪಾಸಿಟಿವ್ ಬಂದಿದೆ.
ಹೀಗಾಗಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಸಿಬ್ಬಂದಿಯಲ್ಲೂ ಆತಂಕ ಮನೆ ಮಾಡಿದೆ. ಆಸ್ಪತ್ರೆಯ ಬಾಣಂತಿಯರಿಗೂ ಸೋಂಕು ತಗುಲಿದ ಭೀತಿ ಎದುರಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿರುವ ಸುಮಾರು 20ಕ್ಕೂ ಹೆಚ್ಚು ಬಾಣಂತಿಯರಿಗೆ ಕ್ವಾರಂಟೈನ್ ಮಾಡಲಾಗಿದ್ದು, ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಮೂಡಲಗಿ ಪೊಲೀಸ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮೂಡಲಗಿ 33 ವರ್ಷದ ಪೋಲಿಸ್ ಸಿಬ್ಬಂದಿಗೆ ಇಂದು ಸೋಂಕು ದೃಢಪಟ್ಟಿದರಿಂದ ಪೋಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.