ಆನಂದಕಂದರ ಕಥೆಗಳು ದೇಶೀಯ ಎಲ್ಲ ಮಗ್ಗುಲವನ್ನು ಪರಿಚಯಿಸುತ್ತವೆ…ಪ್ರೊ. ಮಹಾನಂದ ಪಾಟೀಲ
ಗೋಕಾಕ: ಜುಲೈ-೨೦. ನೈಜ ಬದುಕನ್ನು ಪ್ರತಿಬಿಂಬಿಸುವದರೊಂದಿಗೆ ಹಳ್ಳಿಗರ ಬದುಕಿನ ಎಲ್ಲ ಮುಖಗಳನ್ನು ಆನಂದಕಂದರ ಕಥಾಸಾಹಿತ್ಯ ಕಟ್ಟಿಕೊಡುತ್ತವೆ ಎಂದು ಗೋಕಾಕ ಎಲ್ .ಇ .ಟಿ. ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ,ಪ್ರಾಧ್ಯಾಪಕಿ ಮಹಾನಂದ ಪಾಟೀಲ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್-19 ಲಾಕ್ ಡೌನ್ ಸಂದರ್ಭದ ಗೂಗಲ್ ಮೀಟ ವಿಶೇಷ ಉಪನ್ಯಾಸ ಮಾಲಿಕೆ ನಾಲ್ಕನೇ ಗೋಷ್ಠಿಯಲ್ಲಿ “ಬೆಟಗೇರಿ ಕ್ರಷ್ಣಶರ್ಮರ ಕಥೆಗಳು ಕುರಿತು ಮಾತನಾಡುತ್ತಾ, ಸೃಜನಶೀಲ ಹಾಗೂ ಸೃಜನೇತರ ಸಾಹಿತ್ಯ ಕೃಷಿ ಮಾಡಿದ ಬೆಟಗೇರಿಯವರು ಸಮಯ ಮತ್ತು ಸಂದರ್ಭವನ್ನು ಸಶಕ್ತವಾಗಿ ದುಡಿಸಿಕೊಂಡಿದ್ದಾರೆ ಎಂದರು.
ಹಿರಿಯ ಕವಯತ್ರಿ ಶ್ರೀಮತಿ ಶಕುಂತಲ ದಂಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೆಬಿನಾರದಲ್ಲಿ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ, ಡಾ.ಸಿ.ಕೆ. ನಾವಲಗಿ, ಲಕ್ಷ್ಮಣ್ ಚೌರಿ, ಪ್ರೊ. ಸುರೇಶ ಮುದ್ದಾರ, ಪ್ರೊ, ಸುಭಾಷ್ ವಾಲೀಕಾರ, ಪ್ರೊ. ಯರಿಯಪ್ಪ ಬೆಳಗುರ್ಕಿ, ಪ್ರೊ. ಶಿವಲೀಲಾ ಪಾಟೀಲ, ಪ್ರೊ. ವಿದ್ಯಾ ರಡ್ಡಿ, ಪುಷ್ಪಾ ಮುರಗೋಡ, ಈಶ್ವರ ಮಮದಾಪೂರ, ಮಾರುತಿ ದಾಸನ್ನವರ, ರಾಮಚಂದ್ರ ಕಾಕಡೆ, ಅರುಣ್ ಸವತಿಕಾಯಿ, ಪ್ರೊ. ಶಂಕರ ನಿಂಗನೂರ, ಅಶೋಕ್ ಲಗಮಪ್ಪಗೋಳ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ದೀಪಾ ಶಿಂತ್ರಿ ಸ್ವಾಗತಿಸಿದರು. ಮೋನಿಕಾ ಹಲವಾಯಿ ಪರಿಚಯಿಸಿದರು. ವೆಬಿನಾರ್ ಸಂಘಟಕ-ಸಂಚಾಲಕರಾದ ಕಲಾವಿದ ಹಾಗೂ ಸಾಹಿತಿ ಪ್ರಾ. ಜಯಾನಂದ ಮಾದರ ನಿರೂಪಿಸಿ, ವಂದಿಸಿದರು.