ಬೆಳಗಾವಿ ಜಿಲ್ಲೆ ಇಂದು ಕೂಡ ಡಬಲ್ ಸೆಂಚುರಿ
ದಾಖಲೆ ಬರೆದಿದೆ. ಇಂದು ಸೋಂಕಿತರ ಸಂಖ್ಯೆ 214
ಕಂಡು ಬಂದಿದ್ದು ಇದು ಜಿಲ್ಲೆಯಲ್ಲಿಯೇ ಇಂದು ಸತತ
ಡಬ್ಬಲ್ ಸೆಂಚುರಿ ದಾಖಲಿಸಿದ ಎರಡನೆಯ
ದಿನವಾಗಿದೆ . ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ
ಸಂಖ್ಯೆ 1532 ಕ್ಕೆ ಏರಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇಂದು 4 ಜನರು ಮೃತಪಟ್ಟರು
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಒಂದೇ ದಿನದಲ್ಲಿ 5 ಸಾವಿರಕ್ಕೂ ಹೆಚ್ಚುಜನರಿಗೆ ಕೊರೊನಾ ಸೋಂಕು ತಗುಲುವ ಮೂಲಕ ಹೊಸ ದಾಖಲೆ ಬರೆದಿದೆ. ಇಂದು ರಾಜ್ಯದಲ್ಲಿ 5030 ಜನರಿಗೆ ಸೋಂಕು ತಗಲಿದರೆ 97 ಜನ ಬಲಿಯಾಗಿದ್ದಾರೆ
ಇಂದು ಬೆಂಗಳೂರು ನಗರ ಒಂದರಲ್ಲಿಯೇ 2207 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು ರಾಯಚೂರು 258,, ಕಲಬುರ್ಗಿ 229, ದಕ್ಷಿಣ ಕನ್ನಡ 218, ಬೆಳಗಾವಿ 214, ಧಾರವಾಡ 183, ಬಳ್ಳಾರಿ 164, ಬೆಂಗಳೂರು ಗ್ರಾಮಾಂತರ 161, ಉಡುಪಿ 160, ಮೈಸೂರು 116, ಹಾಸನ 108, ದಾವಣಗೆರೆ 107, ಬಾಗಲಕೋಟೆ 106, ಬೀದರ್ 94, ಉತ್ತರ ಕನ್ನಡ 83, ಶಿವಮೊಗ್ಗ 82, ಗದಗ 72, ಚಿಕ್ಕಬಳ್ಳಾಪುರ 65, ಚಿಕ್ಕಮಗಳೂರು 62, ತುಮಕೂರು 56, ಯಾದಗಿರಿ 55, ಮಂಡ್ಯ 50, ಕೋಲಾರ 40, ಚಾಮರಾಜ ನಗರ 27, ರಾಮನಗರ 26, ಕೊಡಗು 22, ವಿಜಯಪುರ 20, ಹಾವೇರಿ 18, ಕೊಪ್ಪಳ 17, ಚಿತ್ರದುರ್ಗ 10 ಕೊರೊನಾ ಸೋಂಕು ಪತ್ತೆಯಾಗಿವೆ.
ಬೆಂಗಳೂರು ನಗರದಲ್ಲಿ 48, ದಕ್ಷಿಣ ಕನ್ನಡದಲ್ಲಿ 7, ಬೆಳಗಾವಿಯಲ್ಲಿ 4, ಬಳ್ಳಾರಿಯಲ್ಲಿ 5, ಮೈಸೂರಿನಲ್ಲಿ 8, ಬೀದರ್, ಚಿಕ್ಕಬಳ್ಳಾಪುರಗಳಲ್ಲಿ ತಲಾ 3, ಹಾವೇರಿ, ವಿಜಯಪುರ, ರಾಮನಗರ ಜಿಲ್ಲೆಗಳಲ್ಲಿ ತಲಾ 1, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಗದಗ, ಶಿವಮೊಗ್ಗ, ಹಾಸನ, ಧಾರವಾಡ, ರಾಯಚೂರು ಜಿಲ್ಲೆಗಳಲ್ಲಿ ತಲಾ 2 ಸಾವಿನ ಪ್ರಕರಣಗಳು ವರದಿಯಾಗಿವೆ.