ಕುಲಗೋಡ ವ್ಯಕ್ತಿಯೊರ್ವನಿಗೆ ಕೋವಿಡ್-19 ಪತ್ತೆ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪೂಜೇರಿ ತೋಟದ 52 ವರ್ಷದ ವ್ಯಕ್ತಿಯೊರ್ವನಿಗೆ ಇಂದು ಕರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಹುಟ್ಟಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ 15 ದಿನಗಳ ಹಿಂದೆ ವಯಕ್ತಿಕ ಕಾರಣಕ್ಕೆ ಹುಬ್ಬಳ್ಳಿ ಪ್ರಯಾಣ ಮಾಡಿದ ಹಿನ್ನೇಲೆಯಲ್ಲಿ ಸೋಂಕು ದೃಡಪಟ್ಟಿದ್ದು ಜನರು ಹೆಚ್ಚಿನ ಜಾಗೃತಿ ವಹಿಸುವದು ಅನಿವಾರ್ಯತೆ ಎದುರಾಗಿದೆ.
ಗ್ರಾಮವು ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಗೆ ಕೇಂದ್ರವಾಗಿದ್ದು ಕರೋನಾ ಕಾಣಿಸಿಕೊಂಡಿದ್ದು ಗ್ರಾಮಸ್ಥರಿಗೆ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿದೆ.
ಸೋಂಕಿತನಿಗೆ 13 ದಿನಗಳ ಹಿಂದೆ ಅನಾರೋಗ್ಯಕ್ಕೆ ಸ್ಥಳಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು ಆರೋಗ್ಯ ಸರಿಹೋಗದಿರುವದರಿಂದ 3 ದಿನಗಳ ಹಿಂದೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಮುಂಜಾನೆ ಪಾಸಿಟಿವ ದೃಡವಾಗಿದ್ದು ಮನೆ ಹಾಗೂ ಸ್ಥಳೀಯ 2 ಆಸ್ಪತ್ರೆಗಳನ್ನು ಸಿಲ್ ಡೌನ್ ಮಾಡಲಾಗಿದೆ
ನಾಳೆ ಕುಲಗೋಡದಲ್ಲಿ ನಡೆಯಬೇಕಿದ್ದು ಶನಿವಾರ ಸಂತೆ ರದ್ದು ಮಾಡಲಾಗಿದೆ. ಹಾಗೂ ವ್ಯಾಪರಸ್ಥರು, ರೈತರಿಗೆ ಮಾರಾಟ ನಿಶೆದಿಸಲಾಗಿದೆ ಎಂದು ಗ್ರಾ.ಪಂ ಪಿಡಿಓ ಸದಾಶಿವ ದೇವರ ತಿಳಿಸಿದ್ದಾರೆ.
IN MUDALGI Latest Kannada News