ಮೂಡಲಗಿ: ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏ.14ರ ವರೆಗೆ ಲಾಕ್‍ಡೌನ್ ಘೋಷಿಸಿರುವುದರಿಂದ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಜನರ ಆರೋಗ್ಯ ಕಾಪಾಡಲು ಕಾನೂನು ಸುವ್ಯವಸ್ಥೆ
ಪಾಲಿಸುತ್ತಿರುವ ಪೋಲಿಸ್ ಸಿಬ್ಬಂದಿ, ಆರೋಗ್ಯ ಇಲಾಖೆಯ ವೈದ್ಯಧಿಕಾರಿಗಳು, ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರಿಗೆ, ಕೆಇಬಿ ನೌಕರರು, ಹಾಗೂ ಪೌರ ಕಾರ್ಮಿಕರಿಗೆ, ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಸದಸ್ಯರು ತಂಪು ಪಾನೀಯ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಕಾರ್ಯದರ್ಶಿ ಸುಭಾಸ್ ಗೊಡ್ಯಾಗೋಳ, ಎಲ್.ಸಿ. ಗಾಡವಿ,
ಲಕ್ಷ್ಮಣ ಅಡಿಹುಡಿ, ಭಗವಂತ ಉಪ್ಪಾರ, ಭೀರು ವನಸನ್ನಿ, ರಮೇಶ ಉಪ್ಪಾರ ಮತ್ತಿತರರು ಉಪಸ್ಥಿತರಿದ್ದರು.
