ಇಂದು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮಕ್ಕೆ ಕೊರೋನಾ ಪ್ರವೇಶ, ಮೊದಲ ಬಲಿ ಪಡೆದ ಮಹಾಮಾರಿ.
ಮೂಡಲಗಿ : ಇಂದು ಹಳ್ಳೂರ ಗ್ರಾಮದ ಗಾಂಧಿನಗರ ತೋಟದ 33 ವಯಸ್ಸಿನ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಆದರೆ ಆ ವ್ಯಕ್ತಿ ನಿನ್ನೆ ತಾನೆ ಮೃತಪಟ್ಟಿದ್ದಾನೆ, ಹಾಗೆ ನೀನೆ ತಾನೇ ಆ ವ್ಯಕ್ತಿಯ ಅಂತ್ಯಸಂಸ್ಕಾರವು ಕೂಡಾ ನಡೆದು ಹೋಗಿದೆ.
ಕೆಲವು ದಿನಗಳ ಅನಾರೋಗ್ಯ ಹಿನ್ನೆಲೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಮೊದಲ ನೆಗೆಟಿವ್ ವರದಿ ಬಂದ ಹಿನ್ನೆಲೆ ಆ ವ್ಯಕ್ತಿಯ ಮತ್ತೊಮ್ಮೆ ಗಂಟಲು ಧ್ರುವ ಪರೀಕ್ಷೆ ತೆಗೆದುಕೊಂಡು. ವರದಿ ಬರುವವರೆಗೂ ಹೋಂ ಕ್ವಾರೆಂಟೈನ್ ಇರಬೇಕು ಎಂಬ ಮೆಸೇಜ್ ಸಹ ಅವರಿಗೆ ಬಂದಿದೆ.
ಆದರೆ ಇಂದು ಬೆಳಗ್ಗೆ ತಾಲೂಕಾ ಆರೋಗ್ಯ ಇಲಾಖೆಯ ಬಲ್ಲ ಮೂಲಗಳ ಪ್ರಕಾರ ಆ ವ್ಯಕ್ತಿಗೆ ಪಾಸಿಟಿವ್ ಇದೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆಯಿಂದ ಆ ವ್ಯಕ್ತಿಯ ಮನೆಗೆ ನೂರಾರು ಜನ ಹೋಗಿಬರುವುದು ಮಾಡುತ್ತಿದ್ದಾರೆ, ಇದರಿಂದ ಮತ್ತಷ್ಟು ಜನರಿಗೆ ಆತಂಕ ಹೆಚ್ಚಾಗಿದೆ.
ಆ ವ್ಯಕ್ತಿಯ ಸಹೋದರ ಹೇಳುವ ಪ್ರಕಾರ ನಿನ್ನೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ನೆಗೆಟಿವ್ ಇರುವ ಕಾರಣದಿಂದ ಆ ಶವವನ್ನು ನಮಗೆ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಆ ವ್ಯಕ್ತಿಯ ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡಲಾಗಿದೆ
ಆದರೆ ರಿಪೋರ್ಟ್ ಬರುವ ಮೊದಲೇ ಆ ಶವವನ್ನು ಪ್ಯಾಕ್ ಮಾಡಿ ಹೊರಗೆ ಬಿಡಲು ಸಾಧ್ಯವೇ ಹಾಗೂ ತಾಲೂಕಾ ಆಸ್ಪತ್ರೆಗೆ ಮಾಹಿತಿ ನೀಡದೆ ಶವವನ್ನು ಬಿಡುಗಡೆ ಮಾಡಬಹುದಾ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದರ ಬಗ್ಗೆ ಸತ್ಯಾಸತ್ಯತೆಗಳು ತಿಳಿಯಬೇಕಾದರೆ ಸೂಕ್ತವಾದ ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.