ಗ್ರಾಮಗಳ ಶಾಸ್ತ್ರೀಯ ಬದ್ದ ಅಧ್ಯಯನದ ಅಗತ್ಯವಿದೆ : ಪ್ರೊ. ಶಂಕರ ನಿಂಗನೂರ
ಗೋಕಾಕ: ಒಂದು ಗ್ರಾಮದ ಪ್ರಸಿದ್ಧಿಗೆ ಅನೇಕರ ತ್ಯಾಗವಿದೆ. ಗ್ರಾಮಗಳ ಚರಿತ್ರೆಯನ್ನು ಜಾನಪದ ಕಥೆಗಳ ಮೂಲಕ ಹಾಗೂ ಶಾಸನಗಳ ಮೂಲಕ ತಿಳಿಯಬಹುದಾಗಿದೆ ಎಂದು ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಶಂಕರ ನಿಂಗನೂರ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿ ಸೆಮಿನಾರ್ ಅಲ್ಲ ವೇಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ 26ನೇ ಗೋಷ್ಠಿಯಲ್ಲಿ “ಐತಿಹಾಸಿಕ ದೇವರ ಕಲ್ಲೋಳಿ ” ಎಂಬ ವಿಷಯ ಕುರಿತು ಮಾತನಾಡುತ್ತಾ ಕಪ್ಪುಕಲ್ಲಿನ ಹಾಸಿಗೆಯ ಮೇಲೆ ಹೊಳೆ ಹರಿದಿದ್ದರಿಂದ ಈ ಗ್ರಾಮಕ್ಕೆ ಕಲ್ಲೋಳಿ ಎಂದು ಹೆಸರು ಬಂದಿದೆಂದು ಊಹಿಸಬಹುದಾಗಿದೆ. ಒಟ್ಟಾರೆ ಗ್ರಾಮಗಳ ಅಧ್ಯಯನದಿಂದ ಐತಿಹಾಸಿಕ ಹಿನ್ನೆಲೆ ದೊರೆಯುತ್ತದೆ ಮತ್ತು ಗ್ರಾಮಗಳ ಶಾಸನಬದ್ದ ಅಧ್ಯನದ ಅಗತ್ಯವಿದೆ ಎಂದು ಹೇಳಿದರು.
ಕಲಾವಿದ-ಸಾಹಿತಿ ಪ್ರಾ. ಜಯಾನಂದ ಮಾದರ ಸಂಘಟನೆ ಮತ್ತು ಸಂಚಾಲಕತ್ವದಲ್ಲಿ ರವಿವಾರದಂದು ಮೂಡಿಬಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಬರಹಗಾರ-ಕಾದಂಬರಿಕಾರ ಶ್ರೀ ಅಶೋಕಬಾಬು ನೀಲಗಿರಿ ಮಾತನಾಡಿ, ಪ್ರತಿ ಗ್ರಾಮದಲ್ಲಿ ಹನುಮಂತ ಗುಡಿಗಳಿವೆ ಆದ್ದರಿಂದ ಹನುಮನಿಲ್ಲದ ಹಳ್ಳಿ ಯಿಲ್ಲ ಗಣಪತಿ ಇಲ್ಲದ ಗ್ರಾಮವಿಲ್ಲ ಎಂದು ಹೇಳಿದರು.