ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣ ಪತ್ತೆ ! ಕಾರ್ಮಿಕ ಇಲಾಖೆಯಿಂದ 500 ಕಿಟ್ಟ ವಿತರಣೆ, ಅಧಿಕಾರಿಯಿಂದ ತಾಲೂಕಿಗೆ 400 ಕಿಟ್ಟ
100 ಕಿಟ್ಟಗಳು ಮಂಗಮಾಯ,ಎಲ್ಲಿ ಹೋದವು ಆ ಕಿಟ್ಟಗಳು….?
ಮೂಡಲಗಿ : “ಮೂಡಲಗಿ ಕಾರ್ಮಿಕ ಇಲಾಖೆಯ ಕರ್ಮಕಾಂಡ ! ಫಲಾನುಭವಿಗಳ ಆಯ್ಕೆ ಇಲ್ಲದೆ ಮನಸ್ಸಿಗೆ ಬಂದ ಹಾಗೆ ಕಿಟ್ಟ ವಿತರಿಸಿದ ಅಧಿಕಾರಿ, ನಿಜವಾದ ಕಾರ್ಮಿಕರಿಗಿಲ್ಲ “ಕಾರ್ಮಿಕ ಇಲಾಖೆಯ ಆಹಾರ ಕಿಟ್ಟ” ಎಂಬ ಶೀರ್ಷಿಕೆ ಅಡಿ ಮಂಗಳವಾರ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗೆ ಕಾರ್ಮಿಕ ಇಲಾಖೆಯ ಸಚಿವ ಶಿವರಾಮ್ ಹೆಬ್ಬಾರ ಅವರು ಬೆಳಗಾವಿಯ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಈ ಘಟನೆ ಬಗ್ಗೆ ತನಿಖೆ ಮಾಡಲು ಸೂಚಿಸಿದರು.
ಆದರೆ ಈ ವಿಷಯದ ಬಗ್ಗೆ ಬೆಳಗಾವಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಘಟನೆಯ ಮಾಹಿತಿಗಾಗಿ ವರದಿಗಾರನ್ನು ಸಂಪರ್ಕಿಸಿದಾಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.
ಹೌದು ಓದುಗರೇ ಈ ಘಟನೆಯಲ್ಲಿ ಒಂದರಮೇಲೊಂದು ಹಗರಣಗಳು ಬೆಳಕಿಗೆ ಬರುತ್ತಿದ್ದು ಇನ್ನೂ ತನಿಖೆ ವೇಳೆಯಲ್ಲಿ ಇನ್ನು ಅದೆಷ್ಟು ಹಗರಣಗಳ ಬಾಗಿಲು ತರೆಯುತ್ತವೇ ಆ ದೇವರೇ ಬಲ್ಲ !
ಇವತ್ತು ಮತ್ತೊಂದು ಹಗರಣ ಬೆಳಕಿಗೆ ಬಂದಿರುವುದು ಯಾವುದು ಗೋತಾ..? ಅದು ಇಲ್ಲಿದೇ ನೋಡಿ ಕಾರ್ಮಿಕ ಇಲಾಖೆಯ ಸಾಹೇಬರು ಮಾಡಲಗಿ ತಾಲೂಕಿಗೆ ಬರಿ 400 ಆಹಾರ ಕಿಟ್ಟುಗಳು ಬಂದಿದೆ ಎಂದು ಹೇಳಿ, ತಾಲೂಕಿನ ಕಾರ್ಮಿಕರಿಗೂ ಹೇಳಿದೆ ಏಕಾಏಕಿಯಾಗಿ ಬಂದು ಕಿಟ್ಟಗಳನ್ನು ವಿತರಣೆ ಮಾಡಿದ್ದರು, ಮತ್ತೇ ಕಾರ್ಮಿಕರು ಕಿಟ್ಟ ಕೇಳಿದಾಗ ಎಲ್ಲಾ ಕಿಟ್ಟಗಳನ್ನು ಆಗಿದ್ದಾವೆ ನೊಡೋಣಾ ಮತ್ತೇ ಬಂದರೆ ನಿಮ್ಮಗೆ ಕೊಡುತ್ತೇನೆ ಎಂದು ಹೇಳಿದರು.
ಆದರೆ ಇಂದು ಆ ಘಟನೆ ಕುರಿತು ಮೇಲಾಧಿಕಾರಿಗಳು ವರದಿಗಾರನೊಂದಿಗೆ ಮಾತನಾಡುವಾಗ ಮೂಡಲಗಿ ತಾಲೂಕಿಗೆ ಬರಿ 400 ಕಿಟ್ಟ ಬಂದಿದೆ ಅದರಲ್ಲೇ ಹೀಗೆ ಅವ್ಯವಹಾರ ನಡೆದಿದೆ ಎಂದು ವರದಿಗಾರ ಕೇಳಿದಾಗ ಮೇಲಾಧಿಕಾರಿಗಳು ಹೇಳಿದ ಮಾತು ಕೇಳಿ ವರದಿಗಾರನಿಗೆ ಒಂದು ಕ್ಷಣ ದಿಗ್ಬçಮೆಯಾಗಿದೆ, ಯಾಕೆಂದರೆ ಅವರು ಹೇಳಿರುವುದು ಏನು ಗೋತ್ತಾ.. ಅದು ಮೂಡಲಗಿ ತಾಲೂಕಿಗೆ 500 ಕಿಟ್ಟಗಳ ಬಂದಿದೆ ಎಂದು.
ಹಾಗಾದರೇ ಇನ್ನುಳಿದ ಆ 100 ಆಹಾರ ಕಿಟ್ಟಗಳನ್ನು ಎಲ್ಲಿಗೆ ಹೋದವು ಅವು ಏನ ಆಗವು ಎಂಬುದ ಬಗ್ಗೆ ತನಿಖೆಯ ವೇಳಿಯಲ್ಲಿ ತಿಳಿಯಬೇಕು ಅಷ್ಟೇ.
ಈ ಘಟನೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಸಚಿವರ ಸೂಚನೆ ಮೇರಿಗೆ ಬೆಳಗಾವಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮೂಡಲಗಿ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.