ತುಕ್ಕಾನಟ್ಟಿ: ಸತತ ಪರಿಶ್ರಮ, ನಿರಂತರ ಅದ್ಯಯನ ಯಶಸ್ಸಿನ ದಾರಿ- ಶೃತಿ.
ಮೂಡಲಗಿ: ಸತತ ಪರಿಶೃಮ ನಿರಂತರ ಅಧ್ಯಯನ ಮಾಡಿದಾಗ ಯಶಸ್ಸು ತಾನಾಗಿಯೇ ಬರುತ್ತದೆ. ಜೊತೆಗೆ ಗುರುವಿನ ಮಾರ್ಗದರ್ಶನದಿಂದ ಉತ್ತಮ ಗುರಿ ಮುಟ್ಟಲು ಸಾದ್ಯ ಎಂದು ಎಸ್.ಎಸ್.ಎಲ್.ಸಿ ರ್ಯಾಂಕ ವಿಜೇತೆ ಕುಮಾರಿ ಶೃತಿ ಪಾಟೀಲ ಅಭಿಪ್ರಾಯ ಪಟ್ಟರು.
ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾದ್ಯಮದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಯುಕ್ತ ತಾಲೂಕಿನ ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜನಪ್ರತಿನಿಧಿಗಳಿಂದ ಗುರುವಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಉತ್ತಮ ಗುರಿ ಉತ್ತಮ ಗುರು ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ, ಸಾಧಿಸಲೇಬೇಕೆಂಬ ಛಲ ಇದ್ದರೆ ಎಲ್ಲವೂ ಸಾದ್ಯವಾಗುತ್ತದೆ. ನನ್ನ ಯಶಸ್ಸಿಗೆ ತಂದೆ ತಾಯಿ ಗುರುಗಳು ಸ್ನೇಹಿತರು ಎಲ್ಲರೂ ಕಾರಣರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೂಡಲಗಿ ವಲಯದಿಂದ ಇಂಗ್ಲೀಷ ಮಾದ್ಯಮದಲ್ಲಿ ರಾಜ್ಯಕ್ಕೆ 4 ನೇ ರ್ಯಾಂಕ ಪಡೆದ ಕಲ್ಲೋಳಿಯ ಮುರಾರ್ಜಿ ಶಾಲೆಯ ಸತ್ಯನಾರಾಯಣ ಕಂಡ್ರಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತುಕ್ಕಾನಟ್ಟಿಯ ಸರಕಾರಿ ಕನ್ನಡ ಶಾಲೆ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾದ್ಯಮದಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಘಟಪ್ರಭಾದ ಕೆ.ಆರ್.ಎಚ್. ಶಾಲೆಯ ಕುಮಾರಿ ಶೃತಿ ಪಾಟೀಲ ಹಾಗೂ ಕಲ್ಲೋಳಿ ಮುರಾರ್ಜಿ ಶಾಲೆಯ ವಿದ್ಯಾರ್ಥಿ ಇಂಗ್ಲೀಷ ಮಾದ್ಯಮದಲ್ಲಿ ರಾಜ್ಯಕ್ಕೆ 4 ನೇ ಸ್ಥಾನ ಪಡೆದ ಸತ್ಯನಾರಾಯಣ ಕಂಡ್ರಟ್ಟಿ ಇವರನ್ನು ಹಾಗೂ ತುಕ್ಕಾನಟ್ಟಿಯ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆನ್ನವರ ಮಾತನಾಡಿ, ಈ ಪ್ರತಿಭಾವಂತ ವಿದ್ಯಾರ್ಥಿಗಳ ಪರೀಶ್ರಮ ಸಾಧನೆ ಉಳಿದ ಮಕ್ಕಳಿಗೆ ಪ್ರೇರಣೆಯಾಗಲಿ ಹಾಗೂ ಮುಂದಿನ ದಿನಗಳಲ್ಲಿ ಉಳಿದ ಮಕ್ಕಳು ಕೂಡ ಸಾದನೆ ಮಾಡಲಿ ಎಂಬುದೇ ನಮ್ಮ ಉದ್ದೇಶ ಎಂದರು.
ಕಲ್ಲೋಳಿಯ ಸಿ.ಆರ.ಪಿ. ಜಿ.ಕೆ.ಉಪ್ಪಾರ ಮಾತನಾಡಿ, ಬೇರೆ ಬೇರೆ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕರೆದು ಸತ್ಕರಿಸುತ್ತಿರುವದು ಈ ಶಾಲೆಯ ಶಿಕ್ಷಕರ ಕ್ರಮ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಪರಶುರಾಮ ಗದಾಡಿ ಗ್ರಾ. ಪಂ. ಮಾಜಿ ಉಪಾದ್ಯಕ್ಷ ಶಿವಪ್ಪ ಮರ್ದಿ ಗ್ರಾ.ಪಂ. ಮಾಜಿ ಸದಸ್ಯ ಭರಮಪ್ಪ ಉಪ್ಪಾರ, ಗಂಗಪ್ಪ ಭರ್ಚಿ ಕಲ್ಲೋಳೀ ಸಿ.ಆರ್.ಪಿ. ಜಿ.ಕೆ.ಉಪ್ಪಾರ ಶಿಕ್ಷಕರಾದ ಲಕ್ಷ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್, ಶಂಕರ ಲಮಾಣಿ. ಎಸ್.ಆರ್. ಕುಲಕರ್ಣಿ, ಕಿರಣ ಭಜಂತ್ರಿ, ಸಂಗೀತಾ ತಳವಾರ. ಎಮ್.ಕೆ.ಕಮ್ಮಾರ, ಮಹಾದೇವ ಗೋಮಾಡಿ ಉಪಸ್ತಿತರಿದ್ದರು.