ಮೂಡಲಗಿ: ಮಹಾಮಾರಿ ಕೊರೋನಾ ಇಡೀ ದೇಶದ ತುಂಬಾ ತನ್ನ ರುದ್ರ ನರ್ತನ್ ತೋರಿಸುತ್ತಾ ಜನರ ಜೀವನದಲ್ಲಿ ತುಂಬಲಾದರ ನೋವುಗಳನ್ನು ನೀಡಿದ ಪರಿಣಾಮ ಬಡತನದಲ್ಲಿ ಇರುವ ಜನರಿಗೆ ಒಂದು ತುತ್ತಕ್ಕೂ ಪರದಾಡುವ ಪರಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೊರೋನಾ ವಾರಿಯರ್ಸ್ ಆಗಿ ತಮ್ಮ ಕುಟುಂಬವನ್ನು ಲೆಕ್ಕಿಸದೇ ಸಾರ್ವಜನಿಕರ ಉಳಿವಿಗಾಗಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಹಾಗೂ ಸ್ವಯಂಸೇವಕರು ಮತ್ತು ಜನರಲ್ಲಿ ಜಾಗೃತಿ ಮೂಡಿಸಿದ ಕಲಾವಿದರ ಬಳಗಕ್ಕೆ ಸ್ಥಳೀಯ ಗಾರ್ಡನ್ ಅಭಿವೃದ್ದಿ ಸಂಸ್ಥೆಯೂ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಗೌರವ ಸ್ವೀಕರಿಸಿದ ಎಲ್ಲ ಕೊರೋನಾ ವಾರಿಯರ್ಸ್‍ಗಳು ಮಾತನಾಡಿ, ಸ್ಥಳೀಯ ಗಾರ್ಡನ್ ಅಭಿವೃದ್ಧಿ ಸಂಸ್ಥೆಯೂ ನಮ್ಮ ಸೇವೆಯನ್ನು ಗುರುತಿಸಿ ನೀಡಿರುವ ಈ ಪ್ರಮಾಣ ಪತ್ರ ನಮಗೆ ಇನ್ನೂ ಹೆಚ್ಚಿನ ಸಾಮಾಜಿಕ ಕೆಲಸಗಳನ್ನು ಮಾಡುವಂತೆ ಪ್ರೋತ್ಯಾಹ ನೀಡಿದೆ ಆದರಿಂದ ಈ ಸಂಸ್ಥೆಗೆ ಹಾಗೂ ಆಡಳಿತ ಮಂಡಲಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು.
ಇನ್ನೂ ಈ ಸಂಸ್ಥೆ ಅನೇಕ ಕೆಲಸಗಳನ್ನು ಮಾಡವಂತಾಗಲ್ಲಿ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಾ, ಅವರಿಗೆ ಧೈರ್ಯ ತುಂಬವಂತ ಕೆಲಸ ಮಾಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸುಧೀರ್ ನಾಯರ್, ಕಾರ್ಯದರ್ಶಿ ಸುಭಾಷ ಗೋಡ್ಯಾಗೋಳ, ಲಕ್ಷ್ಮಣ ಅಡಿಹುಡಿ, ಸಿದ್ದು ದುರದುಂಡಿ, ಈರಪ್ಪ ಡವಳೇಶ್ವರ, ಯಲ್ಲಾಲಿಂಗ ವಾಳದ, ಅಕ್ಕಮಹಾದೇವಿ ಗೋಡ್ಯಾಗೋಳ, ರೇವತಿ ಮರಡಿ, ಮಂಜುನಾಥ ರೇಳೆಕರ, ಮಹಾಲಿಂಗ ಗೋಡ್ಯಾಗೋಳ,ಶಿವು ಮರಡಿ ಮುಂತಾದವರ ಉಪಸ್ಥಿತಿರಿದ್ದರು.
Home / ತಾಲ್ಲೂಕು / ಕೊರೋನಾ ವಾರಿಯರ್ಸ್ ಆಗಿ ತಮ್ಮ ಕುಟುಂಬವನ್ನು ಲೆಕ್ಕಿಸದೇ ಸಾರ್ವಜನಿಕರ ಉಳಿವಿಗಾಗಿ ಕರ್ತವ್ಯ ನಿರ್ವಹಿಸಿದವರಿಗೆ ಅಭಿನಂದನಾ ಪತ್ರ ನೀಡಿ ಗೌರವ
Check Also
ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ
Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …