ಹಿಂದೂ ಮುಸ್ಲಿಂ ಭಾವೈಕ್ಯತೆಯ ಗಣೇಶ ಹಬ್ಬ
ಕುಲಗೋಡ: ನಾಡಿನ ಎಲ್ಲೇಡೆ ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತೀದೆ. ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಗಜಾನನ ಉತ್ಸವ ಕಮಿಟಿ ಬಸ್ ನಿಲ್ದಾಣ ವತಿಯಿಂದ ವಿನೂತನವಾಗಿ ಹಬ್ಬ ಆಚರಿಸಲಾಯಿತು. ಹಿಂದೂ ಮುಸ್ಲಿಂ ಬಂಧುಗಳು ಒಂದಾಗಿ ಗಣೇಶ ಹಬ್ಬ ಆಚರಿಸಿದ್ದಾರೆ.
ಇದೇ ತರನಾಗಿ ಪ್ರತಿ ಓಣಿಗಳಲ್ಲಿ,ಗ್ರಾಮಗಳಲ್ಲಿ ಎರಡು ಸಮುದಾಯದ ಯುವಕರು ಸೌಹಾರ್ದತೆ ಎಲ್ಲ ಹಬ್ಬಗಳನ್ನು ಆಚರಿಸಬೇಕು ಇಂತಹ ಬೇಳವಣಿಗೆ ರಾಜ್ಯದಲ್ಲಿ ಕಾಣಬೇಕು ಎಂಬು ಕುಲಗೋಡ ಸಾರಿಗೆ ನಿಯಂತ್ರಕ ಎ ಬಿ ಜಮಾದಾರ ಹೇಳಿದ್ದಾರೆ.
ಇವರು ಸ್ಥಳಿಯ ನಿಲ್ದಾಣದ ಗಣೇಶ ಪ್ರತಿಷ್ಠಾಪಣೆ ಮಾಡಿ ಗಣೇಶ ಸ್ಲೋಕ್ ಹೇಳುವ ಮೂಲಕ ಎಲ್ಲರೂ ಒಂದೇ ಎಂದು ಸಾರಿದ್ದಾರೆ.
ಆಚರಣೆಯಲ್ಲಿ ಕುಲಗೋಡ ಸಾರಿಗೆ ನಿಯಂತ್ರಕರು ಎ.ಬಿ ಜಮಾದಾರ. ಶಂಕರ ಹಾದಿಮನಿ. ಸುರೇಶ ಭೋಸಲೆ. ಸತೀಶ ಚಿಪ್ಪಲಕಟ್ಟಿ. ಅಶೋಕ ಹಿರೇಮೇತ್ರಿ. ಜಮಾಲಸಾಬ ಮುಲ್ಲಾ. ಶಮೀರ ಮುಲ್ಲಾ. ಬಸು ಕಮಕೇರಿ. ಕಿರಣ ಗಂಗನ್ನವರ. ಚೇತನ ಅಂಗಡಿ.ಶಿವಾ ಬಾಗಿಮನಿ.ಭೀಮಶಿ ಗಂಗನ್ನವರ.ಅನಿಲ ಹಾದಿಮನಿ.ವಿಠ್ಠಲ ಮಲಕನ್ನವರ ಹಾಗೂ ಕಮೀಟಿ ಸರ್ವ ಸದಸ್ಯರು ಹಾಗೂ ಮುಸ್ಲಿಂ ಭಾಂದವರು,ಗ್ರಾಮಸ್ಥರು ಇದ್ದರು.