ಬೆಳಗಾವಿ: ಬೆಳಗಾವಿಯ ಜಿಲ್ಲಾ ಪಂಚಾಯತನ್ ಹಳೆಯ ಕಟ್ಟಡದಲ್ಲಿ ರಾಜ್ಯಸಭಾ ಸದಸ್ಯರ ಜನಸಂಪರ್ಕ ಕಾರ್ಯಾಲಯ ಅ 31 ರಂದು ಸೋಮವಾರ ಅತ್ಯಂತ ಸರಳ ಪೂಜಾ ಸಮಾರಂಭ ನಡೆಯಿತು.
ಕೋವಿಡ್-19 ಕಾರಣದಿಂದ ಸರಳವಾದ ಪೂಜಾ ವಿಧಾನವನ್ನು ಕಸಾಯಿ ಕರ್ಮಚಾರಿಗಳು ದ್ವೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಪ್ರಾರಂಭಕ್ಕೆ ಚಾಲನೆ ನೀಡಿದರು. ಸಂಸದರು ರಾಜಸಭಾ ಈರಣ್ಣ ಕಡಾಡಿ ಗೋಮಾತೆಗೆ ಪೂಜೆ ಸಲ್ಲಿಸಿ ಗೋಮಾತೆಯೊಂದಿಗೆ ಕಾರ್ಯಾಲಯವನ್ನು ಪ್ರವೇಶಿಸಿದರು.
ಇಂದೊoದು ವಿಶಿಷ್ಟ ಪೂರ್ಣ ಕಾರ್ಯಕ್ರಮವಾಗಿದ್ದು ಈ ಸಂದರ್ಭದಲ್ಲಿ ಮಾನ್ಯ ಕೇಂದ್ರ ರಾಜ್ಯ ರೈಲ್ವೆ ಮಂತ್ರಿಗಳಾದ ಸುರೇಶ ಅಂಗಡಿ, ಗೌರವಾನಿತ್ವ ಉಪಸಭಾಪತಿಗಳಾದ ಆನಂದ ಮಾಮನಿ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ, ಬೆಳಗಾವಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಸಂಜಯ ಪಾಟೀಲ, ಬೆಳಗಾವಿ ಮಹಾನಗರ ಬಿಜೆಪಿ ಅಧ್ಯಕ್ಷರಾದ ಶಶಿಕಾಂತ ಪಾಟೀಲ, ಬಿ ಎಸ್ ಕಡಾಡಿ, ಈರಣ್ಣ ಅಂಗಡಿ, ವಾಸುದೇವ ಸವತಿಕಾಯಿ, ಬಸವರಾಜ ಸುಲ್ತಾನಪೂರ, ಈರಣ್ಣ ಚಂದರಗಿ, ರಾಜು ಖೋತ ಅನೇಕರು ಉಪಸ್ಥಿತರಿದ್ದರು.
ರಾಜ್ಯಸಭಾ ಸದಸ್ಯರ ಕಾರ್ಯಾಲಯವು ದಿನನಿತ್ಯ ಚಟುವಟಿಕೆಯಿಂದ ಜಿಲ್ಲೆ ಜನರ ಕಷ್ಟ ರ್ಕಾಪಣ್ಯಗಳನ್ನು ಪರಿಹರಿಸುವ ಕೇಂದ್ರವಾಗಲೆoದು ಹಾರೈಸಿದರು.