Breaking News
Home / Recent Posts / ಅಂಗವಿಕಲರು ಎಲ್ಲರಂತೆ ಬದುಕಬೇಕಾದರೆ ಮೂಲ ಭೂತ ಸೌಕರ್ಯಗನ್ನು ಒದಗಿಸಿ ಕೊಡುವದು ಅತಿ ಅವಶ್ಯಕವಾಗಿದೆ – ಸಿದ್ದಣ್ಣ ದುರದುಂಡಿ

ಅಂಗವಿಕಲರು ಎಲ್ಲರಂತೆ ಬದುಕಬೇಕಾದರೆ ಮೂಲ ಭೂತ ಸೌಕರ್ಯಗನ್ನು ಒದಗಿಸಿ ಕೊಡುವದು ಅತಿ ಅವಶ್ಯಕವಾಗಿದೆ – ಸಿದ್ದಣ್ಣ ದುರದುಂಡಿ

Spread the love

ಮೂಡಲಗಿ: ಅಂಗವಿಕಲರು ಈ ಸಮಾಜದಲ್ಲಿ ಎಲ್ಲರಂತೆ ಬದುಕಬೇಕಾದರೆ ಮೂಲ ಭೂತ ಸೌಕರ್ಯಗನ್ನು ಅವರಿಗೆ ಒದಗಿಸಿ ಕೊಡುವದು ಅತಿ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು. ಅವರು ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ  ನೆಹರು ಯುವ ಕೇಂದ್ರ ಬೆಳಗಾವಿ, ಜನನಿ ಸಮಗ್ರ ಅಭಿವ್ರದ್ದಿ ಸಂಸ್ಥೆ ಹಾಗೂ ಜೈ ಕರ್ನಾಟಕ ಅಂಗವಿಕರ ಗ್ರಾಮಿಣ ಅಭಿವ್ರದ್ದಿ ಸಂಘ ಹಳ್ಳೂರ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು ಸರ್ಕಾರ ಅಂಗವಿಕಲರಿಗೆ ಸಿಗುವಂತ ಎಲ್ಲಾ ಯೋಜನೆ ಮತ್ತು ಸೌಲಭ್ಯಗಳನ್ನು ನೀಡಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಏಂಬ ನಾನುಡಿಯಂತೆ ಪ್ರತಿಯೋಬ್ಬ ಅಂಗವಿಕಲರು ಒಂದಾಗಿ ಬಾಳಬೇಕು. ಅರಬಾಂವಿ ಶಾಸಕರು ಹಾಗೂ ಕೆ ಎಮ್ ಎಪ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಹೇಚ್ಚಿನ ಸಂಘನೆ ಮಾಡುತ್ತೆವೆ ಎಂದು ಹೇಳಿದರು.

ಚಿಕ್ಕನಂದಿಯ ಮಂಜುಳಾ ಗೊರಗುದ್ದಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹರ್ಷೀ ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಯಲ್ಲಾಲಿಂಗ ವಾಳದ ಮಾತನಾಡಿ ಸಮಾಜದಲ್ಲಿ ಅಂಗವಿಕಲರ ಬಗ್ಗೆ ತಾರತಮ್ಯ ಕಾಣದೆ ಎಲ್ಲರನ್ನು ಒಂದೆ ಭಾವದಲ್ಲಿ ಕಾಣುವ ಮನೊಭಾವ ಬೆಳಸಿಕೋಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೈ ಕರ್ನಾಟಕ ಅಂಗವಿಕಲರ ಗ್ರಾಮಿಣ ಅಭಿವ್ರದ್ದಿ ಸಂಘದ ಅಧ್ಯಕ್ಷ ಹಾಲಪ್ಪಾ ಗಡ್ಡೇಕಾರ ಮಾತನಾಡಿ ಸರ್ಕಾರಗಳು ಅಂಗವಿಕಲರ ಅಭಿವ್ರದ್ದಿ ನಿಗಮ ಸ್ಥಾಪನೆ ಮಾಡಬೇಕು ಎಂದು ಹೇಳಿದರು.

ಪ್ರಕಾಶ ಸುಳನ್ನವರ ಮಾತನಾಡಿ ಎಲ್ಲಾ ಅಂಗವಿಕಲರು ಒಂದೆ ಎಂಬ ಬಾವನೆ ಇರಬೇಕು. ನೆಹರು ಯುವ ಕೇಂದ್ರವು ಜಿಲ್ಲೆಯಾದ್ಯಂತ ಹಳ್ಳಿಗಳಲ್ಲಿ ಸಂಘಟನೆ ಮಾಡುವ ಕಾರ್ಯ ಶ್ಲಾಘನಿಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಸಪ್ಪಾ ಮುರಿˌ ಶಿವಬಸು ಸುಳನ್ನವರ ಬಾಳವ್ವಾ ಪಟ್ಟಣಶೇಟ್ಟಿ ರವಿ ಶಾಬಣ್ಣವರ ಜಗದೀಶ ಹೀರೆಮಠ ಬಂಗಾರೇಪ್ಪಾ ಸುಳನ್ನವರ ಶಿವಾನಂದ ಹುಣ್ಣೂರ ದರೇಪ್ಪಾ ಮಿರ್ಜಿ ನಿಂಗವ್ವಾ ಕುಲಿಗೋಡ ಈರವ್ವಾ ಚೌಲಗಿ ಲಕ್ಕಪ್ಪಾ ಹಂಡೆಬಾಗ ಬಾಳಪ್ಪ ಮುಗಳಖೋಡ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎನ್ ವಾಯ್ ಸಿ ಲಕ್ಷ್ಮೀಬಾಯಿ ಮಾದರ ನಿರೂಪಿಸಿ ಸ್ವಾಗತಿಸಿದರು. ಶಿವಲಿಂಗ ಬ್ಯಾಳಿ ವಂದಿಸಿದರು.


Spread the love

About inmudalgi

Check Also

ಅದ್ಧೂರಿಯಾಗಿ ನಡೆದ ಬೆಟಗೇರಿ ಹನುಮಂತ ದೇವರ ಓಕುಳಿ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ಮಾರುತಿ ದೇವರ ಕಡೆ ಓಕುಳಿ ದಿನ ಜೂ.9ರಂದು ವಿಜೃಂಭನೆಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ