Breaking News
Home / ತಾಲ್ಲೂಕು / ಜಿಲ್ಲಾಧಿಕಾರಿಗಳಿಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ನಿರಾಶ್ರಿತರ ಮನವಿ ಅರ್ಪಣೆ

ಜಿಲ್ಲಾಧಿಕಾರಿಗಳಿಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ನಿರಾಶ್ರಿತರ ಮನವಿ ಅರ್ಪಣೆ

Spread the love

ಜಿಲ್ಲಾಧಿಕಾರಿಗಳಿಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ನಿರಾಶ್ರಿತರ ಮನವಿ ಅರ್ಪಣೆ

ಬೆಳಗಾವಿಗೆ ತೆರಳಿ ಮನವಿ ಮಾಡಿಕೊಂಡ ನಿರಾಶ್ರಿತರು
ಬೆಳಗಾವಿ : ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹಾನಿಯಾದ ಮನೆಗಳ ಫಲಾನುಭವಿಗಳು ನಿರಾಶ್ರಿತರಾಗಿದ್ದು, ಅವರಿಗೆ ಕೂಡಲೇ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ನಿರಾಶ್ರಿತರು ಮನವಿ ಸಲ್ಲಿಸಿದರು.
ಇಂದಿಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿದ ಅವಳಿ ತಾಲೂಕುಗಳ ನಿರಾಶ್ರಿತರು ನಿರಂತರ ಮಳೆ ಮತ್ತು ಘಟಪ್ರಭಾ ನದಿಯ ಭಾರಿ ಪ್ರವಾಹದಿಂದ ಸುಮಾರು 7861 ಮನೆಗಳು ಹಾನಿಯಾಗಿವೆ. 6225 ಮನೆಗಳು ಎ ವರ್ಗದಲ್ಲಿ 2189, ಬಿ ವರ್ಗದಲ್ಲಿ 1573 ಮತ್ತು ಸಿ ವರ್ಗದಲ್ಲಿ 2463 ಮನೆಗಳು ಮಂಜೂರಾಗಿದ್ದು, ಇವುಗಳಲ್ಲಿ ಮಂಜೂರಾದ ಮನೆಗಳಲ್ಲಿ 215 ಫಲಾನುಭವಿಗಳ ವರ್ಗ(ಕೆಟಗೇರಿ) ಬದಲಾವಣೆ, 88 ಫಲಾನುಭವಿಗಳ ಬ್ಯಾಂಕ್ ಖಾತೆ, ಇತರೇ ತಿದ್ದುಪಡಿ ಮತ್ತು 477 ಫಲಾನುಭವಿಗಳ ಸ್ಥಳ ಬದಲಾವಣೆಗಾಗಿ ಒಟ್ಟು 780 ಪ್ರಕರಣಗಳು ನಿಗಮದಲ್ಲಿ ಬಾಕಿ ಇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೇ ನಿಗಮದ ಸೈಟ್‍ನಲ್ಲಿ ಎಂಟ್ರಿ ಮಾಡಿರುವ 651 ಫಲಾನುಭವಿಗಳ ಹೆಸರುಗಳು ಹೈಡ್, ಡೆಲಿಟ್ ಆಗಿದ್ದು, 985 ಫಲಾನುಭವಿಗಳ ಫೈಲಗಳು ತಹಶೀಲ್ದಾರ ಕಾರ್ಯಾಲಯ ಮತ್ತು ಪಂಚಾಯತ ಮಟ್ಟದಲ್ಲಿ ಡಾಟಾ ಎಂಟ್ರಿ ಮಾಡಲು ಬಾಕಿ ಇವೆ. ವರ್ಗ ಬದಲಾವಣೆ, ತಿದ್ದುಪಡಿ, ಸ್ಥಳ ಬದಲಾವಣೆ, ಹೈಡ್, ಡೆಲಿಟ್ ಮತ್ತು ಡಾಟಾ ಎಂಟ್ರಿ ಬಾಕಿ ಇರುವ ಫಲಾನುಭವಿಗಳು ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದ್ದರಿಂದ ವಾಸಿಸಲು ಯಾವುದೇ ವಸತಿ ಸೌಲಭ್ಯವಿಲ್ಲದ್ದರಿಂದ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲನ್ನು ತೋಡಿಕೊಂಡರು.
ಗೋಕಾಕ ತಾಲೂಕಿನ ಗೋಕಾಕ, ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ, ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ, ಕೊಣ್ಣೂರ, ಶಿಂಗಳಾಪೂರ, ಕುಂದರಗಿ, ಅಂಕಲಗಿ, ಮಲ್ಲಾಪೂರ ಪಿಜಿ, ಧುಪದಾಳ, ಪಾಮಲದಿನ್ನಿ, ಉರಬಿನಹಟ್ಟಿ, ಶೀಗಿಹೊಳಿ, ಬೂದಿಹಾಳ, ಯದ್ದಲಗುಡ್ಡ, ಮಾಲದಿನ್ನಿ, ಉಪ್ಪಾರಹಟ್ಟಿ, ಖನಗಾಂವ, ಮಿಡಕನಟ್ಟಿ, ಹೂಲಿಕಟ್ಟಿ, ಕೊಳವಿ, ತವಗ, ಕೈತನಾಳ, ಕನಸಗೇರಿ, ಡುಂ ಉರಬಿನಹಟ್ಟಿ, ಅರಭಾವಿ ದಾವಲತ್ತಿ, ಚಿಕ್ಕನಂದಿ, ತೆಳಗಿನಹಟ್ಟಿ, ಮಕ್ಕಳಗೇರಿ ಮೂಡಲಗಿ ತಾಲೂಕಿನ ತಿಗಡಿ, ಸುಣಧೋಳಿ, ಭೈರನಟ್ಟಿ, ಹುಣಶ್ಯಾಳ ಪಿವಾಯ್, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ, ಹುಣಶ್ಯಾಳ ಪಿಜಿ, ವಡೇರಹಟ್ಟಿ, ಫುಲಗಡ್ಡಿ, ಮಸಗುಪ್ಪಿ, ಧರ್ಮಟ್ಟಿ, ಪಟಗುಂದಿ, ಕಮಲದಿನ್ನಿ, ರಂಗಾಪೂರ, ಮುನ್ಯಾಳ ಗ್ರಾಮಗಳು 2019 ರ ಅಗಸ್ಟ್ ತಿಂಗಳಲ್ಲಿ ಪ್ರವಾಹ ಹಾಗೂ ಮಳೆಯಿಂದ ಮನೆಗಳು ಹಾನಿಗೀಡಾಗಿವೆ.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಸಿದ್ದಪ್ಪ ಹಂಜಿ, ಮಹಾದೇವ ಪತ್ತಾರ, ಅಲ್ಲಪ್ಪ ಕಂಕಣವಾಡಿ, ರಮೇಶ ಬೀರನಗಡ್ಡಿ, ಕಾಮಪ್ಪ ಕಿತ್ತೂರ, ನ್ಯಾಯವಾದಿಗಳಾದ ಮುತ್ತೆಪ್ಪ ಕುಳ್ಳೂರ, ಬಿ.ಬಿ. ಬೀರನಗಡ್ಡಿ, ಕಾಮಸಿ ಕರೆನ್ನವರ, ಸಿದ್ದಪ್ಪ ಪೂಜೇರಿ, ಬಸವಂತ ಕಾಪಸಿ, ಅಡಿವೆಪ್ಪ ಹಂಜಿ, ಅಡಿವೆಪ್ಪ ಕಿತ್ತೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕಳೆದ ವರ್ಷದಲ್ಲಿ ಭಾರೀ ಪ್ರವಾಹ ಮತ್ತು ನಿರಂತರ ಮಳೆಯಿಂದಾಗಿ ಸಾಕಷ್ಟು ಮನೆಗಳು ಹಾನಿಯಾಗಿವೆ. ಘಟಪ್ರಭಾ ನದಿಗೆ ಬಂದ ಪ್ರವಾಹದಿಂದ ಅಂದಾಜು 8 ಸಾವಿರಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿವೆ. ಸರ್ಕಾರದಿಂದ ಈಗಾಗಲೇ ಕೆಲವರಿಗೆ ಮನೆಗಳ ಪರಿಹಾರ ದೊರಕಿದೆ. ಕೆಲ ಫಲಾನುಭವಿಗಳ ತಾಂತ್ರಿಕ ಸಮಸ್ಯೆಗಳು ಉಂಟಾಗಿದ್ದು, ಅದನ್ನು ನಿವಾರಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಸತಿ ಸಚಿವ ಸೋಮಣ್ಣ, ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಜಿಲ್ಲಾಧಿಕಾರಿ ಹಾಗೂ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನಿರಾಶ್ರಿತರ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ನಿರ್ದೇಶನ ನೀಡಿದ್ದೇನೆ.
ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ


Spread the love

About inmudalgi

Check Also

ಬೆಟಗೇರಿ ವಿವಿಧೆಡೆ ಸಂಭ್ರಮದಿಂದ ನಡೆದ 76 ನೇ ಗಣರಾಜ್ಯೋತ್ಸವ ದಿನಾಚರಣೆ

Spread the love ಬೆಟಗೇರಿ ವಿವಿಧೆಡೆ ಸಂಭ್ರಮದಿಂದ ನಡೆದ 76 ನೇ ಗಣರಾಜ್ಯೋತ್ಸವ ದಿನಾಚರಣೆ ಬೆಟಗೇರಿ :ಗೋಕಾಕ ತಾಲೂಕಿನ ಬೆಟಗೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ