Breaking News
Home / ತಾಲ್ಲೂಕು / “ತುಕ್ಕಾನಟ್ಟಿ ಬರ್ಡ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಪೌಷ್ಠಿಕ ಮಾಸಾಚರಣೆ”

“ತುಕ್ಕಾನಟ್ಟಿ ಬರ್ಡ್ಸ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಪೌಷ್ಠಿಕ ಮಾಸಾಚರಣೆ”

Spread the love

ಮೂಡಲಗಿ : ಸಾಮೂಹಿಕ ಚಳುವಳಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಮೂಲಕ ಅಪೌಷ್ಠಿಕತೆಯನ್ನು ನಿರ್ಮೂಲನೆ ಮಾಡಿಕೊಳ್ಳಬೇಕು ಎಂದು ಬರ್ಡ್ಸ ಸಂಸ್ಥೆಯ ಚೇರಮನ್ನ ಆರ್ ಎಮ್ ಪಾಟೀಲ ಹೇಳಿದರು.

ಅವರು ತುಕ್ಕಾನಟ್ಟಿ ಐ.ಸಿ.ಏ.ಆರ್-ಬರ್ಡ್ಸ ಕೃಷಿ ವಿಜ್ಞಾನ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮೂಡಲಗಿ, ಇಫ್ಕೋ ಹಾಗೂ ಐ.ಸಿ.ಐ.ಸಿ.ಐ ಪೌಂಡೇಶನ್ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಪೌಷ್ಠಿಕ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳು ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಭಾರತ ಸರಕಾರವು ರಾಷ್ಟ್ರೀಯ ಪೋಷಣೆ ಮಾಸಿಕ ಎಂದು ಘೋಷಿಸಿದೆ ಎಂದರು.

ಕೆ.ವಿ.ಕೆಯ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಿ.ಸಿ.ಚೌಗಲಾ ಮಾತನಾಡಿ, ಹಿತ್ತಲಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಕಡಿಮೆ ವೆಚ್ಚದಲ್ಲಿ ಬೆಳೆದು ಅವುಗಳನ್ನು ಸೇವಿಸಲು ಸೂಚಿಸಿದರು ಹಾಗೂ ಇಫ್ಕೋ ದವರು ನೀಡಿದ ವಿವಿಧ ತರಕಾರಿಯ ಬೀಜಗಳ ಪೋಟ್ಟಣವನ್ನು ಉಪಯೋಗಿಸಿ ಪೌಷ್ಠಿಕ ಕೈತೋಟವನ್ನು ಸ್ಥಾಪಿಸಲು ಸೂಚಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಗೋಕಾಕ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಎಮ್. ಎಲ್. ಜಾನಮಟ್ಟಿ ಮಾತನಾಡಿ, ಮನೆಯ ಆವರಣದಲ್ಲಿ ಲಿಂಬು ಹಾಗೂ ನುಗ್ಗೆ ಸಸಿಗಳನ್ನು ಬೆಳೆಸಿ, ಅದರಿಂದ ವಿಟಾಮಿನ್ ಸಿ ಮತ್ತು ಕಬ್ಬಿಣದ ಅಂಶಗಳ ಸಂಪೂರ್ಣ ಉಪಯೋಗ ತೆಗೆದುಕೊಳ್ಳಲು ಮಹಿಳೆಯರಿಗೆ ತಿಳಿಸಿದರು.

ಕೆ.ವಿ.ಕೆಯ ಗೃಹ ವಿಜ್ಞಾನಿ ರೇಖಾ ಬಿ. ಕಾರಭಾರಿ ಅವರು ಕೆ.ವಿಕೆ ಯಲ್ಲಿರುವಂತಹ ಪೌಷ್ಠಿಕ ಕೈತೋಟ ಘಟಕವನ್ನು ಪ್ರದರ್ಶಿಸಿ ವಿವಿದ ತರಕಾರಿ ಮತ್ತು ಹಣ್ಣುಗಳ ಸಸಿಗಳ ನಿರ್ವಹಣೆ ಹಾಗೂ ಪೌಷ್ಠಿಕಾಂಶಗಳ ಮಹತ್ವವನ್ನು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಿ. ಎಮ್. ಪಾಟೀಲ ರವರು ತೋಟಗಾರಿಕೆ ಬೆಳೆಗಳು ಮತ್ತು ಅದರ ನಿರ್ವಹಣೆ ಕುರಿತು, ಡಾ. ಎಸ್. ಸಿ. ಕೌಜಲಗಿ ಅವರು ಹೈನುಗಾರಿಕೆ ಉತ್ಪನ್ನಗಳ ಮಹತ್ವವನ್ನು ವಿವರಿಸಿದರು.

ಸಮಾರಂಭದಲ್ಲಿ ಆದರ್ಶ ಎಚ್. ಎಸ್, ಐ.ಸಿ.ಐ.ಸಿ ಪೌಂಡೇಶನ್ ನ್ ರಾಜಾಸಾಬ ಶಿಕಾರಿ, ಅಂಗನವಾಡಿ ಮೇಲ್ವಿಚಾರಕಿ ಡಿ.ಎಸ್.ಮ್ಯಾಗೇರಿ ಮತ್ತಿತರು ಇದ್ದರು.

ವಿಜ್ಞಾನಿ ಎನ್. ಆರ್. ಸಾಲಿಮಠ ಸ್ವಾಗತಿಸಿದರು, ಎಸ್. ಎಸ್. ಶರ್ಮಾ ವಂದಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ