ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಮನೆ, ಮನೆಗೆ ಪ್ರವಚನ ಕಾರ್ಯಕ್ರಮವನ್ನು ಶುಕ್ರವಾರ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಉದ್ಘಾಟಿಸಿದರು.
ಅಧಿಕ ಮಾಸಕ್ಕೆ ‘ಮನೆ, ಮನೆಗೆ ಪ್ರಚನ; ಕೋವಿಡ್ ಅರಿವು’ ಕಾರ್ಯಕ್ರಮಕ್ಕೆ ಚಾಲನೆ‘
ಮನುಷ್ಯರಿಗೆ ಅರುಹಿನ ಸತ್ಸಂಗ ಅವಶ್ಯವಿದೆ’
ಮೂಡಲಗಿ: ‘ಮನುಷ್ಯರು ಬಾಹ್ಯ ಸ್ವಚ್ಛತೆಯೊಂದಿಗೆ ಆಂತರಿಕ ಸ್ವಚ್ಛತೆಗೆ ಅರುಹಿನ ಸತ್ಸಂಗ ಅವಶ್ಯವಿದೆ’ ಎಂದು ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಪ್ರವಚನ’ದ ಶುಕ್ರವಾರ ಏರ್ಪಡಿಸಿದ್ದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ದೇಹ ಮನಸ್ಸು ಆರೋಗ್ಯಪೂರ್ಣವಾಗಬೇಕಾದರೆ ಆಧ್ಯಾತ್ಮಿಕ ಚಿಂತನೆ ಇರಬೇಕು ಎಂದರು.
ಅಧಿಕ ಮಾಸದ ಒಂದು ತಿಂಗಳ ಪ್ರವಚನವು ಜಾತ್ಯಾತಿತ, ರಾಜಕಿಯೇತರ ಹಾಗೂ ಮೇಲು, ಕೀಳು ಎನ್ನದೆ ಎಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕು ಎಂದರು.
ಮೂಡಲಗಿಯ ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ ಜನರ ಜೀವನ ಶೈಲಿಯ ಬದಲಾವಣಿಯಿಂದ ರೋಗ, ರುಜೀನಗಳು ಅಧಿಕವಾಗುತ್ತಲಿವೆ. ಕೊರೊನಾ ಸೋಂಕು ಭಯಾನಕವಲ್ಲ, ಪ್ರತಿಯೊಬ್ಬರು ಆರೋಗ್ಯದ ಕುರಿತು ಎಚ್ಚರಿಕೆವಹಿಸುವುದು ಅವಶ್ಯವಿದೆ ಎಂದರು.
ಕೊರೊನಾ ಸೋಂಕಿಗೆ ಸಾರ್ವತ್ರಿಕವಾಗಿ ಲಸಿಕೆ ದೊರೆಯುವವರಿಗೆ ಜನರು ತಮ್ಮ ಜಾಗೃತಿ ಇರಬೇಕು. ಆರೋಗ್ಯದ ನಿಯಮಗಳನ್ನು ಪಾಲಿಸಬೇಕು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಮಾತನಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೂವುದು ಇಂದಿನ ಅವಶ್ಯವಿದೆ ಎಂದರು.
ಅತಿಥಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ಪ್ರವಚನ, ಸತ್ಸಂಗ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಉತ್ತಮ ಸಂಸ್ಕಾರವನ್ನು ರೂಢಿಸುತ್ತವೆ. ಮಕ್ಕಳು ಉತ್ತಮ ನಡೆಯತ್ತ ಸಾಗಲು ಪ್ರೇರಣೆಯಾಗುತ್ತದೆ ಎಂದರು.
ಪ್ರವಚನಾಕಾರ ಶರಣ ಲಕ್ಷ್ಮಣ ದೇವರು ಪ್ರಾಸ್ತಾವಿಕ ಮಾತನಾಡಿ ಮನೆ, ಮನೆಗೆ ಪ್ರವಚನ ಕಾರ್ಯಕ್ರಮವನ್ನು ಆಧ್ಯಾತ್ಮಿಕ ಚಿಂತನೆಯನ್ನು ಮಾಡಿಕೊಳ್ಳಲಿಕ್ಕೆ ಮುಕ್ತ ಅವಕಾಶವಾಗಿದೆ ಎಂದರು.
ಗೋವಿಂದಪ್ಪ ವಂಟಗೋಡಿ, ಆನಂದರಾವ ನಾಯ್ಕ್ ಮತ್ತು ಸಿದ್ದಣ್ಣ ವಡೇಯರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ತಿಕ ಶಾಸ್ತ್ರೀ, ವೀರಯ್ಯ ಶಾಸ್ತ್ರೀಗಳು ಪ್ರಾರಂಭದಲ್ಲಿ ಮಂತ್ರಘೋಷ ಪಠಣ ಮಾಡಿದರು.
ಐಶ್ವರ್ಯ ತಳವಾರ ವಚನ ಗಾಯನ ಮಾಡಿದರು, ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು, ಪ್ರವೀಣ ಹುಕ್ಕೇರಿ ವಂದಿಸಿದರು.